ತಿರುವನಂತಪುರ: ರಾಜ್ಯದ ತುರ್ತು ಆರೋಗ್ಯ ಸೇವಾ ವಾಹನವಾದ 108 ಆಂಬುಲೆನ್ಸ್‍ಗಳು 18 ತಿಂಗಳಲ್ಲಿ ಮೂರು ಲಕ್ಷ ಪ್ರಯಾಣವನ್ನು ನಡೆಸಿದೆ. ಪ್ರಸ್ತುತ, 136 ಸಿಬ್ಬಂದಿಯೊಂದಿಗೆ ರಾಜ್ಯದಾದ್ಯಂತ 316 108 ಆಂಬುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ.
2019 ರ ಸೆಪ್ಟೆಂಬರ್ 25 ರಿಂದ ರಾಜ್ಯದಲ್ಲಿ ಸೇವೆ ಆರಂಭಿಸಿದ 108 ಆಂಬುಲೆನ್ಸ್‍ಗಳು 2021 ರ ಮಾರ್ಚ್ 20 ರ ವೇಳೆಗೆ 3,00,159 ಟ್ರಿಪ್‍ಗಳನ್ನು ಮಾಡಿವೆ. ಈ ಪೈಕಿ ಕೋವಿಡ್‍ಗೆ ಮಾತ್ರ 209141 ಟ್ರಿಪ್‍ಗಳನ್ನು ಮಾಡಲಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ ಅತಿ ಹೆಚ್ಚು 108 ಆಂಬ್ಯುಲೆನ್ಸ್ ಸೇವೆಗಳಿವೆ. ಜಿಲ್ಲೆಯಲ್ಲಿ 42,990 ಟ್ರಿಪ್‍ಗಳಿವೆ. ಕೊಲ್ಲಂ -19,000, ಪತ್ತನಂತಿಟ್ಟು -14,779, ಆಲಪ್ಪುಳ -23,527, ಕೊಟ್ಟಾಯಂ -20,507, ಇಡುಕ್ಕಿ -8,399, ಎರ್ನಾಕುಳಂ -17,698, ತ್ರಿಶೂರ್ -24,481, ಪಾಲಕ್ಕಾಡ್ -34,056, ಮಲಪ್ಪುರಂ -27, 791, ಕೋಝಿಕ್ಕೋಡ್ 20,977, ವಯನಾಡ್ 9,693, ಕಣ್ಣೂರು 22, 117, ಕಾಸರಗೋಡು 14,144 ಎಂಬಂತೆ ಸಂಚಾರ ನಡೆಸಿವೆ.
ತುರ್ತು ಸಂದರ್ಭಗಳಲ್ಲಿ ಜನರು ಕೇರಳದ ಎಲ್ಲಿಂದಲಾದರೂ ಟೋಲ್ ಫ್ರೀ ಸಂಖ್ಯೆ 108 ಗೆ ಕರೆ ಮಾಡಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಬಹುದು. ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ.