ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಎಂಬಾಕೆ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದರು. ಆಕೆ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸಾಕ್ಸ್‌ಗಳನ್ನೂ ಒಳಗೊಂಡಂತೆ ತನ್ನ ಒಳ ಉಡುಪುಗಳಲ್ಲಿ ಚಿನ್ನವನ್ನು ಮುಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಳು.
1.10 ಕೋಟಿ ರೂ. ಮೌಲ್ಯದ 2.41 ಕೆಜಿ ಚಿನ್ನವನ್ನು ಆಕೆಯಿಂದ ವಶಪಡಿಸಿಕೊಳ್ಳಲಾಗಿದೆ.
ಮಾತ್ರವಲ್ಲದೆ ವಿದೇಶಿ ಮೂಲದ ಸಿಗರೇಟ್‌ಗಳನ್ನು ಸಹ ಆಕೆಯ ಬಳಿ ಪತ್ತೆ ಮಾಡಲಾಗಿದೆ. ಆಕೆ ಕೋಪ್ಟಾ ನಿಯಮಗಳನ್ನು ಉಲ್ಲಂಘಿಸಿ ಈ ಸಿಗರೇಟ್ ಗಳನ್ನು ಸಾಗಿಸುತ್ತಿದ್ದಳು.