ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 1104 ಅನಿವಾರ್ಯ ಸೇವೆ ಮತದಾತರ ಅಂಚೆ ಮತದಾನ ಇಂದಿನಿಂದ(ಮಾ.28) ಆರಂಭಗೊಳ್ಳಲಿದೆ.
ಜಿಲ್ಲೆಯಲ್ಲಿ ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಸಾಲಿನ ಮತದಾತರು (570 ಮಂದಿ) ಅತ್ಯಧಿಕ ಮಂದಿ ಇದ್ದಾರೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 10 ಮಂದಿ, ಕಾಸರಗೋಡಿನಲ್ಲಿ 72 ಮಂದಿ, ಉದುಮಾದಲ್ಲಿ 209 ಮಂದಿ, ಕಾಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ 234 ಮಂದಿ ಅನಿವಾರ್ಯ ಸೇವಾ ಮತದಾತರಿದ್ದಾರೆ.
ಇವರಿಗೆ ಮಾ.28,29,30ರಂದು ಪ್ರತ್ಯೇಕ ಮತದಾನ ಕೇಂದ್ರಗಳಲ್ಲಿ ಮತದಾನ ನಡೆಸುವ ಸೌಲಭ್ಯಗಳಿವೆ. ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿ ಸಜ್ಜುಗೊಳಿಸಲಾದ ಮತದಾನ ಕೇಂದ್ರಗಳು ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಸಂಬಂಧ ಪಟ್ಟ ಸಹಾಯಕ ಚುನಾವಣೆ ಅಧಿಕಾರಿ ಅವರ ಮೇಲ್ನೋಟದಲ್ಲಿ ಚಟುವಟಿಕೆ ನಡೆಸಲಿವೆ.
ಆಬ್ಸೆಂಟೀಸ್ ಮತದಾತರು ಅವರ ಸೇವಾ ಗುರುತು ಚೀಟಿ, ಮತದಾನ ಗುರುತು ಚೀಟಿ ಸಹಿತ ಅಂಚೆ ಮತದಾನ ಕೇಂದ್ರಗಳಿಗೆ ಹಾಜರಾಗಿ ಮತಚಲಾಯಿಸಬೇಕು. ಅಂಚೆ ಮತದಾನ ಕೇಂದ್ರಗಳ ಚಟುವಟಿಕೆ ವೀಕ್ಷಣೆಗೆ ಅಭ್ಯರ್ಥಿಗಳಿಗೆ ಮತ್ತು ಅವರ ಏಜೆಂಟರಿಗೆ ಅವಕಶಗಳಿವೆ.
ವಿಧಾನಸಭೆ ಕ್ಷೇತ್ರ-ಅಂಚೆ ಮತದಾನ ಕೇಂದ್ರ- ಎಂಬ ಕ್ರಮದಲ್ಲಿ :
ಮಂಜೇಶ್ವರ : ಮಂಜೇಶ್ವರ ಬ್ಲೋಕ್ ಪಂಚಾಯತ್ ಕಾರ್ಯಾಲಯ(ನೆಲಮಹಡಿ ಕೊಠಡಿ ನಂಬ್ರ 7)
ಕಾಸರಗೋಡು : ಕಂದಾಯ ವಿಭಾಗ ಕಚೇರಿ, ಪೆÇೀರ್ಟ್ ಆಫೀಸ್ ಕಟ್ಟಡ.
ಉದುಮಾ: ಉದುಮಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.
ಕಾಞಂಗಾಡ್ : ಕಾಞಂಗಾಡ್ ಬ್;ಲೋಕ್ ಪಂಚಾಯತ್ ಕಾರ್ಯಾಲಯ.
ತ್ರಿಕರಿಪುರ : ನೀಲೇಶ್ವರ ಬ್ಲೋಕ್ ಪಂಚಾಯತ್ ಕಾರ್ಯಾಲಯ.