ಮ್ಯಾನ್ಮಾರ್: ಶಾಂತಿಯುತ ಪ್ರತಿಭಟನೆಯನ್ನು ಖಂಡಿಸಿ ಜುಂಟಾ ಮಿಲಿಟರಿ ಪಡೆ ದೇಶಾದ್ಯಂತ 114ಕ್ಕೂ ಹೆಚ್ಚು ನಾಗರಿಕರನ್ನು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದೆ.
ಕಳೆದ ತಿಂಗಳು ಮ್ಯಾನ್ಮಾರ್ ನಲ್ಲಿ ಸೇನಾ ದಂಗೆ ನಡೆದ ಬಳಿಕ ನಿನ್ನೆ ದೇಶದ 44 ಪಟ್ಟಣ ಮತ್ತು ನಗರಗಳಲ್ಲಿ ನಾಗರಿಕರ ಹತ್ಯೆ ನಡೆದಿದ್ದು ಅತ್ಯಂತ ರಕ್ತಪಾತದ ದಿನವಾಗಿದೆ. ಹತ್ಯೆಗೊಂಡವರಲ್ಲಿ 13 ವರ್ಷದ ಬಾಲಕಿ ಕೂಡ ಸೇರಿದ್ದಾಳೆ.
ಮೈಕ್ತಿಲಾ ಎಂಬ ಪ್ರದೇಶದಲ್ಲಿ ತನ್ನ ಮನೆಯಲ್ಲಿರುವ ಸಂದರ್ಭದಲ್ಲಿ ಜುಂಟಾ ಸೇನಾ ಪಡೆ ಹಾರಿಸಿದ ಗುಂಡಿನ ದಾಳಿ.ಯಲ್ಲಿ ಈಕೆ ಮೃತಪಟ್ಟಿದ್ದಾಳೆ. ಇದರ ಹೊರತಾಗಿ ಪ್ರತಿಭಟನಾಕಾರರು ಫೆಬ್ರವರಿ 1ರ ಸೇನಾದಂಗೆ ವಿರೋಧಿಸಿ ಯಾಂಗೌನ್, ಮಂಡಲೆ ಮತ್ತು ಇತರ ಪಟ್ಟಣಗಳಲ್ಲಿ ಪ್ರತಿಭಟನೆ ಮುಂದುವರಿಸಿದರು.