ಪತ್ತನಂತಿಟ್ಟು: ಶಬರಿಮಲೆ ಶ್ರೀಧರ್ಮಶಾಸ್ತಾವು ದೇವಾಲಯದಲ್ಲಿ ಸ್ಥಾಪಿಸಲಿರುವ ಅಷ್ಟದಿಕ್ಪಾಲಕರ ಮತ್ತು ನವಗ್ರಹಗಳ ಮರದ ಕೆತ್ತನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇವುಗಳನ್ನು ಏಪ್ರಿಲ್ 11 ರಂದು ಸಬರಿಮಲೆಗೆ ಸಮರ್ಪಿಸಲಾಗುವುದೆಂದು ಅಧಿಕೃತರಿಂದ ತಿಳಿದುಬಂದಿದೆ.
ದೇವಾಲಯದ ಬಲಿಪೀಠದ ಮೇಲ್ಭಾಗದಲ್ಲಿ ಅಷ್ಟ ದಿಕ್ಪಾಲಕರನ್ನು ಇರಿಸಲಾಗುವುದು. ನವಗ್ರಹಗಳನ್ನು ಪ್ರಾರ್ಥನಾ ಮಂದಿರದ ಮೇಲೆ ಪ್ರತಿಷ್ಠಾಪಿಸಲಾಗುವುದು. ಶಿಲ್ಪಗಳನ್ನು ಹದಿನೆಂಟು ಚೌಕಗಳಲ್ಲಿ ಕೆತ್ತಲಾಗಿದೆ. ಈ ಶಿಲ್ಪಗಳನ್ನು ದಿವಂಗತ ಬಡಗಿ ಎಲವಳ್ಳಿ ನಾರಾಯಣನ್ ಆಚಾರ್ಯರ ಪುತ್ರ ನಂದನ್ ನಿರ್ಮಿಸಿದ್ದಾರೆ.
ಮರದ ಕೆತ್ತನೆಗಳನ್ನು ತೇಗದಿಂದ ಮಾಡಲಾಗಿದೆ. ನಂದಿಲಾತು ಸಮೂಹದ ಅಧ್ಯಕ್ಷ ಗೋಪು ನಂದಿಲಾತು ಮತ್ತು ಸ್ನೇಹಿತರು ಶಿಲ್ಪಗಳನ್ನು ದಾನಗೈದಿದ್ದಾರೆ. ಈ ಶಿಲ್ಪಗಳನ್ನು ಮಾ.29 ರಂದು ಬೆಳಿಗ್ಗೆ ತ್ರಿಶೂರ್ ನಿಂದ ಶಬರಿಮಲೆಗೆ ಕೊಂಡೊಯ್ಯಲಾಗುವುದು.