ತಿರುವನಂತಪುರ: ಚಿತ್ರಮಂದಿರಗಳಲ್ಲಿ ಎರಡನೇ ಪ್ರದರ್ಶನ(ಸೆಕೆಂಡ್ ಶೋ) ನಡೆಸಲು ಸರ್ಕಾರ ಅನುಮೋದನೆ ನೀಡಿದೆ. ಚಿತ್ರಮಂದಿರಗಳ ಕೆಲಸದ ಸಮಯ ಮಧ್ಯಾಹ್ನ 12 ರಿಂದ ಮಧ್ಯರಾತ್ರಿ 12 ರವರೆಗೆ ಇರುತ್ತದೆ. ಈ ಮೊದಲು ಬೆಳಿಗ್ಗೆ ಒಂಬತ್ತು ರಿಂದ ರಾತ್ರಿ ಒಂಬತ್ತರ ವರೆಗೆ ಇತ್ತು.
ಕೋವಿಡ್ ಕಾರಣದಿಂದ ಮುಚ್ಚಿದ ಚಿತ್ರಮಂದಿರಗಳು ತೆರೆಯುವಿಕೆಗೆ ಕೋವಿಡ್ ಕೋರ್ ಕಮಿಟಿಯ ತೀರ್ಮಾನಾನುಸಾರ ಈ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ, ಸರ್ಕಾರ ಇಂದು ಎರಡನೇ ಪ್ರದರ್ಶನಕ್ಕೆ ಅನುಮತಿ ನೀಡಿತು. ಕಳೆದ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳು ಎರಡನೇ ಪ್ರದರ್ಶನವನ್ನು ಹೊಂದಿಲ್ಲ. ಇದ ಗಮನಾರ್ಹ ಆದಾಯವನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದೀಗ ಸುಮಾರು 30 ಚಿತ್ರಗಳು ಬಿಡುಗಡೆಯಾಗಲು ಕಾಯುತ್ತಿವೆ.
ಆದಾಯದ ಅರ್ಧದಷ್ಟು ಎರಡನೇ ಪ್ರದರ್ಶನಗಳಿಂದ ಬರುತ್ತವೆ. ಪ್ರದರ್ಶನಕ್ಕೆ ಮಾತ್ರ ಅನುಮತಿ ನಿರಾಕರಿಸುವ ಸರ್ಕಾರದ ಕ್ರಮದ ವಿರುದ್ದ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್, ವಾಣಿಜ್ಯ ಸೇರಿದಂತೆ ಸಿನೆಮಾ ಸಂಸ್ಥೆಗಳು ಸರ್ಕಾರಕ್ಕೆ ಸೂಚನೆ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದವು. ಫೆಬ್ರವರಿಯಿಂದ ಚಿತ್ರಮಂದಿರಗಳ ಎಲ್ಲಾ ಆಸನಗಳಲ್ಲೂ ಕುಳಿತು ಚಿತ್ರ ಪ್ರದರ್ಶನ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ರಾಜ್ಯ ಸರ್ಕಾರ ಅದನ್ನು ಈವರೆಗೆ ಜಾರಿಗೆ ತಂದಿಲ್ಲ.