ತಿರುವನಂತಪುರ: ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಶೇಕಡಾ 13 ರಷ್ಟು ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನಿನ್ನೆ ಕಳೆದ ಸೆಪ್ಟೆಂಬರ್ 25 ರ ನಂತರದ ಅತ್ಯಂತ ಕಡಿಮೆ ದೈನಂದಿನ ಸೋಂಕು ದಾಖಲಿಸಲಾಗಿದೆ. ಕೊವಾಕ್ಸಿನ್, ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿದೆ ಎಂದವರು ಇಂದು ಸುದ್ದಿಗೋಷ್ಠಿಯುಲ್ಲಿ ತಿಳಿಸಿದರು.
ಸ್ಥಳೀಯವಾಗಿ ಮಾರ್ಪಡಿಸಿದ ಯುಕೆ ವೈರಸ್‍ಗಳ ವಿರುದ್ಧ ಕೊವಾಕ್ಸೈನ್ ಪರಿಣಾಮಕಾರಿಯಾಗಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು. ಲಸಿಕೆ ಕೇಂದ್ರಗಳನ್ನು ಹೆಚ್ಚಿಸಲಾಗುವುದು. ಕೋವಿಡ್ ಕೇಂದ್ರಗಳಿಗೆ ನೇರವಾಗಿ ಬರುವವರಿಗೆ ಟೋಕನ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದರು.
ಕೋವಿನ್ ಪೆÇೀರ್ಟಲ್‍ನಲ್ಲಿ 15 ದಿನಗಳ ವ್ಯಾಕ್ಸಿನೇಷನ್ ಅವಧಿಗಳನ್ನು ರಚಿಸಲಾಗುವುದು. ಸೆಶನ್ ಗಳನ್ನು ಪೂರ್ವಯೋಜಿಸಲಾಗುವುದು. ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ಎಚ್ಚರಿಸಿದರು.