HEALTH TIPS

ರಾಜ್ಯದಲ್ಲಿ ಇಂದು 1412 ಮಂದಿಗೆ ಕೊರೊನಾ ಪತ್ತೆ-ಸಂಪರ್ಕದ ಮೂಲಕ 1252 ಮಂದಿಗೆ ಸೋಂಕು-ಕಾಸರಗೋಡು-48 ಸೋಂಕಿತರು

  

          ತಿರುವನಂತಪುರ: ಕೇರಳದಲ್ಲಿ ಇಂದು 1412  ಮಂದಿ  ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 245, ಕೊಲ್ಲಂ 141, ತಿರುವನಂತಪುರ 139, ಎರ್ನಾಕುಳಂ 138, ಮಲಪ್ಪುರಂ 132, ಇಡುಕಿ 104, ತ್ರಿಶೂರ್ 90, ಕಣ್ಣೂರು 82, ಕೊಟ್ಟಾಯಂ 80, ಆಲಪ್ಪುಳ 79, ಪಾಲಕ್ಕಾಡ್ 55, ಕಾಸರಗೋಡು 48, ಪತ್ತನಂತಿಟ್ಟು 48, ವಯನಾಡ್ 31 ಎಂಬಂತೆ ಸೋಂಕು ಬಾಧಿಸಿದೆ.


 

          ಕಳೆದ 24 ಗಂಟೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ವ್ಯಕ್ತಿಯೋರ್ವರಲ್ಲಿ ಕೋವಿಡ್ -19 ದೃಢಪಡಿಸಲಾಗಿದೆ. ಆದರೆ ಯುಕೆ ಯಿಂದ ಬಂದ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಇದರೊಂದಿಗೆ, ಯುಕೆ (98) ಮತ್ತು ದಕ್ಷಿಣ ಆಫ್ರಿಕಾ (2) ಮಂದಿಗೆ ಈವರೆಗೆ ಸೋಂಕು ಕಂಡುಬಂದಿದ್ದು ಒಟ್ಟು 100 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 83 ಮಂದಿಗೆ ಋಣಾತ್ಮಕವಾಗಿದೆ. ಅಲ್ಲದೆ  ಒಟ್ಟು 11 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 39,046 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.62 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,19,31,921 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

        ಕಳೆದ 24 ಗಂಟೆಗಳಲ್ಲಿ  12 ಮಂದಿ ಕೋವಿಡ್ ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಒಟ್ಟು ಕೋವಿಡ್ ನಿಂದ ಮೃತರಾದವರ ಸಂಖ್ಯೆ  4312 ಕ್ಕೆ ಏರಿಕೆಯಾಗಿದೆ. 

       ಇಂದು, ಸೋಂಕು ಪತ್ತೆಯಾದವರಲ್ಲಿ 37 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 1252 ಮಂದಿ ಜನರಿಗೆ ಸೋಂಕು ತಗಲಿತು. 117 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 229, ಕೊಲ್ಲಂ 139, ತಿರುವನಂತಪುರ 86, ಎರ್ನಾಕುಳಂ 130, ಮಲಪ್ಪುರಂ 127, ಇಡುಕ್ಕಿ 100, ತ್ರಿಶೂರ್ 83, ಕಣ್ಣೂರು 65, ಕೊಟ್ಟಾಯಂ 73, ಆಲಪ್ಪುಳ 76, ಪಾಲಕ್ಕಾಡ್ 26, ಕಾಸರಗೋಡು 45, ಪತ್ತನಂತಿಟ್ಟು 42, ವಯನಾಡ್ 31 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ. 

        ಆರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ತ್ರಿಶೂರ್ 2, ಎರ್ನಾಕುಳಂ, ಪಾಲಕ್ಕಾಡ್, ಕೋಝಿಕೋಡ್ ಮತ್ತು ಕಣ್ಣೂರು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.

           ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3030 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 153, ಕೊಲ್ಲಂ 467, ಪತ್ತನಂತಿಟ್ಟು 131, ಆಲಪ್ಪುಳ 217, ಕೊಟ್ಟಾಯಂ 186, ಇಡಕ್ಕಿ 44, ಎರ್ನಾಕುಳಂ 329, ತ್ರಿಶೂರ್ 304, ಪಾಲಕ್ಕಾಡ್ 106, ಮಲಪ್ಪುರಂ 249, ಕೊಝಿಕೋಡ್ 527, ವಯನಾಡ್ 104, ಕಣ್ಣೂರ್ 121, ಕಾಸರಗೋಡು 92 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 39,236 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,34,895 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

          ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,68,505 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,62,993 ಮಂದಿ ಜನರು ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 5,512 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 616 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 356 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries