ಕೋಝಿಕೋಡ್: ಕುಟ್ಯಾಡಿ ಕ್ಷೇತ್ರವನ್ನು ಕೇರಳ ಕಾಂಗ್ರೆಸ್ಸಿಗೆ ಹಸ್ತಾಂತರಿಸುವಲ್ಲಿ ಪಕ್ಷದ ಕಾರ್ಯಕರ್ತರ/ಕಾರ್ಮಿಕರ ಪ್ರತಿಭಟನೆಗೆ ಯಾವುದೇ ಮಹತ್ವ ಕಲ್ಪಿಸಲಾಗದೆಂದೂ, ಕೇರಳ ಕಾಂಗ್ರೆಸ್ ಗೆ ನೀಡಲಾದ ಸ್ಥಾನವನ್ನು ಮತ್ತೆ ಪಡೆದುಕೊಳ್ಳದಿರಲು ಸಿಪಿಎಂ ನಿರ್ಧರಿಸಿದೆ. ಈ ನಿರ್ಧಾರವನ್ನು ಕುನ್ನುಮ್ಮಲ್ ಪ್ರದೇಶ ಸಮಿತಿ ತೆಗೆದುಕೊಂಡಿದೆ.
ಈ ತಿಂಗಳ 14 ರಂದು ಕುಟ್ಯಾಡಿಯಲ್ಲಿ ಈ ನಿಟ್ಟಿನಲ್ಲಿ ಶಕ್ತಿ ಪ್ರದರ್ಶನ ಮತ್ತು ರಾಜಕೀಯ ವಿವರಣಾತ್ಮಕ ಸಭೆ ನಡೆಸಲು ಪ್ರದೇಶ ಸಮಿತಿ ನಿರ್ಧರಿಸಿದೆ. ಕುಟ್ಯಾಡಿ ಸಮಸ್ಯೆಯು ಸಮೀಪದ ಕ್ಷೇತ್ರಗಳಾದ ನಾದಾಪುರಂ, ವಡಗರ ಮತ್ತು ಪೆರಂಪುರ ಕ್ಷೇತ್ರಗಳಿಗೆ ಯಾವುದೇ ಪ್ರತಿಕೂಲತೆ ಬೀರದೆಂದೂ ಸಿಪಿಎಂ ಸಭೆ ಅಂದಾಜಿಸಿದೆ.
ಕೆ.ಪಿ.ಕುನ್ಹಮ್ಮದ್ ಕುಟ್ಟಿ ಅವರನ್ನು ನಾಮನಿರ್ದೇಶನ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯ ಹೊರತಾಗಿಯೂ, ಅದೇ ಕೆ.ಪಿ.ಕುನ್ಹಮ್ಮದ್ ಕುಟ್ಟಿಯನ್ನು ಒಳಪಡಿಸಿ ನಡೆದ ಸಭೆಯಲ್ಲಿ ನಿರ್ಧಾರವನ್ನು ಕೈಗೊಂಡಿರುವುದು ಪ್ರತಿಭಟನಾ ನಿರತ ಕಾರ್ಯಕರ್ತರ ಚಕಿತತೆಗೂ ಕಾರಣವಾಯಿತು.
ಕೇಂದ್ರ ಸಮಿತಿ ಸದಸ್ಯ ಎಳಮರ ಕರೀಮ್ ಮತ್ತು ಜಿಲ್ಲಾ ಕಾರ್ಯದರ್ಶಿ ಪಿ ಮೋಹನನ್ ಸಭೆಯಲ್ಲಿ ಭಾಗವಹಿಸಿದ್ದರು. ಕುಟ್ಯಾಡಿ ಕ್ಷೇತ್ರವು ಕುನ್ನುಮ್ಮಲ್ ಮತ್ತು ವಡಗರ ಪ್ರದೇಶ ಸಮಿತಿಗಳ ವ್ಯಾಪ್ತಿಯಲ್ಲಿದೆ.