ತಿರುವನಂತಪುರ: ಅಧಿಕಾರಕ್ಕೆ ಬಂದ ನಂತರ ಪಿಣರಾಯಿ ಸರ್ಕಾರವು ಆರ್ಥಿಕ ಅಪ್ರಬುದ್ದತೆಯ ಹೆಸರಿನಲ್ಲಿ ಅನೇಕ ಟೀಕೆಗಳಿಗೆ ಗುರಿಯಾಯಿತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಸರ್ಕಾರದ ಬಹುಕೋಟಿ ಜಾಹೀರಾತು ಪ್ರಚಾರದ ಅಂಕಿ ಅಂಶಗಳು ಹೊರಬರುತ್ತಿವೆ. ಸಾರ್ವಜನಿಕ ಕಾರ್ಯಕರ್ತ ಥಾಮಸ್ ಕೆ. ಜಾರ್ಜ್ ಅವರು ಸಲಲಿಸಿದ ಆರ್.ಟಿ.ಐ ದಾಖಲೆಯಲ್ಲಿ ವಿಷಯಗಳು ಬಹಿರಂಗಗೊಂಡಿದೆ.
ಎಡಪಕ್ಷ ಅಧಿಕಾರಕ್ಕೆ ಬಂದಾಗಿನಿಂದ, 2020 ರ ಡಿಸೆಂಬರ್ ವರೆಗೆ ಸರ್ಕಾರಿ ಜಾಹೀರಾತುಗಳಿಗಾಗಿ ಮಾತ್ರ 153.5 ಕೋಟಿ ರೂ. ಟೆಂಡರ್‍ಗಳು, ಪ್ರದರ್ಶನಗಳಂತಹ ಜಾಹೀರಾತುಗಳಿಗಾಗಿ 132 ಕೋಟಿ ರೂ. ಉಳಿದ 21.5 ಕೋಟಿ ರೂ.ಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕಾಗಿ ಖರ್ಚು ಮಾಡಲಾಗಿದೆ.
'ಸ್ಟಿಲ್ ಫಾರ್ವರ್ಡ್' ಶೀರ್ಷಿಕೆಯಡಿ ನಡೆಸಿದ ಅಭಿಯಾನದ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿನ ಜಾಹೀರಾತುಗಳು, ಹೋಡಿರ್ಂಗ್‍ಗಳು ಮತ್ತು ತಾತ್ಕಾಲಿಕ ಬೋರ್ಡ್‍ಗಳಂತಹ ಹೊರಾಂಗಣ ಜಾಹೀರಾತುಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆರ್.ಟಿ.ಐ.ಗೆ ನೀಡಿದ ಉತ್ತರದಲ್ಲಿ ಬಿಲ್ ಪಾವತಿಸಿದ ನಂತರವೇ ನಿಖರವಾದ ಮೊತ್ತವನ್ನು ಕಂಡುಹಿಡಿಯಬಹುದು. ಕೆ.ಎಸ್.ಆರ್.ಟಿ.ಸಿ.ಯಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದಕ್ಕೆ 60.5 ಲಕ್ಷ ರೂ.ವಿನಿಯೋಗವಾಗಿದೆ. ಇದನ್ನು ಮುಂಚಿತವಾಗಿ ಪಾವತಿಸಲಾಗಿದೆ ಎಂದು ವರದಿ ಬಹಿರಂಗಪಡಿಸುತ್ತದೆ. ಜಾಹೀರಾತುಗಳಿಗಾಗಿ ಖರ್ಚು ಮಾಡಿದ ಒಟ್ಟು ಮೊತ್ತ 200 ಕೋಟಿ ರೂ.ಎಂಬುದು ಗಮನಾರ್ಹ.!