ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಪ್ರಿಸೈಡಿಂಗ್ ಅಧಿಕಾರಿ, ಫಸ್ಟ್ ಪೋಲಿಂಗ್ ಅಧಿಕಾರಿಗಳ ತರಬೇತಿ ಮಾ. 15ರಿಂದ ಆರಂಭಗೊಳ್ಳಲಿದೆ. 15 ಬ್ಯಾಚ್ ಗಳ ಮೂಲಕ 600 ಮಂದಿಗೆ ತರಬೇತಿ ನೀಡಲಾಗುವುದು. ಮಾ.15, 16ರಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ, 15,16,17ರಂದು ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ತರಬೇತಿ ನಡೆಯಲಿದ್ದು, 30ಬ್ಯಾಚ್ ಗಳ ಮೂಲಕ 1200 ಮಂದಿತರಬೇತಿಯಲ್ಲಿ ಭಾಗವಹಿಸುವರು.
ಪೆರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾ.15,16ರಂದು ತರಬೇತಿ ನಡೆಯಲಿದ್ದು, 17 ಬ್ಯಾಚ್ ಗಳಲ್ಲಿ 680 ಮಂದಿ ಭಾಗವಹಿಸುವರು. ಮಾ.15,16,17ರಂದುಕಾಞಂಗಾಡ್ ನೆಹರೂ ಕಾಲೇಜಿನಲ್ಲಿ ನಡೆಯುವ ತರಬೇತಿಯಲ್ಲಿ 24 ಬ್ಯಾಚ್ ಗಳಲ್ಲಿ 960 ಮಂದಿ ಭಾಗವಹಿಸಬಹುದು. ತ್ರಿಕರಿಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುª Àತರಬೇತಿಯಲ್ಲಿ 22 ಬ್ಯಾಚ್ ಗಳ ಮೂಲಕ 880 ಮಂದಿ ಭಾಗವಹಿಸಬಹುದು.ಮೂರು ದಿನಗಳಲ್ಲಿ ಒಟ್ಟು 108 ಬ್ಯಾಚ್ ಗಳಲ್ಲಿ ಒಟ್ಟು 4320 ಮಂದಿಗೆ ತರಬೇತಿ ನೀಡಲಾಗುವುದು.