ತಿರುವನಂತಪುರ: ಬಿಜೆಪಿಯ ರಾಜ್ಯ ಚುನಾವಣಾ ಸಮಿತಿಯನ್ನು ಪ್ರಕಟಿಸಲಾಗಿದೆ. ಪಕ್ಷಕ್ಕೆ ಹೊಸದಾಗಿ ಆಗಮಿಸಿದ ಮೆಟ್ರೊಮ್ಯಾನ್ ಇ.ಶ್ರೀಧರನ್ ಸಹಿತ 16 ಸದಸ್ಯರ ಸಮಿತಿ ರಚಿಸಲಾಗಿದ್ದು ಆದರೆ ಶೋಭಾ ಸುರೇಂದ್ರನ್ ಅವರನ್ನು ಕೈಬಿಡಲಾಗಿದೆ ಎಂಬುದು ಗಮನಾರ್ಹ.
ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಕೇಂದ್ರ ಸಚಿವ ವಿ.ಮುರಲೀಧರನ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ, ಮಾಜಿ ರಾಜ್ಯ ಅಧ್ಯಕ್ಷರಾದ ಕುಮ್ಮನಂ ರಾಜಶೇಖರನ್, ಒ ರಾಜಗೋಪಾಲ್ ಮತ್ತು ಸಿ.ಕೆ. ಪದ್ಮನಾಭನ್, ಪಿ.ಕೆ. ಕೃಷ್ಣದಾಸ್, ಮೆಟ್ರೊಮ್ಯಾನ್ ಇ ಶ್ರೀಧರನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಟಿ.ರಮೇಶ್, ಜಾರ್ಜ್ ಕುರಿಯನ್, ಸಿ ಕೃಷ್ಣಕುಮಾರ್, ಪಿ ಸುಧೀರ್, ರಾಜ್ಯ ಉಪಾಧ್ಯಕ್ಷ ಎ.ಎನ್ ರಾಧಾಕೃಷ್ಣನ್, ಎಂ. ಗಣೇಶನ್, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸುಭಾಷ್, ಸಹ ಪ್ರಧಾನ ಕಾರ್ಯದರ್ಶಿ ಮತ್ತು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನಿವೇದಿತಾ ಸುಬ್ರಮಣಿಯನ್ ರಾಜ್ಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ.
ಉಸ್ತುವಾರಿ ಸಿಪಿ ರಾಧಾಕೃಷ್ಣನ್ ಮತ್ತು ಸಹ-ಉಸ್ತುವಾರಿ ಸುನಿಲ್ ಕುಮಾರ್ ವಿಶೇಷ ಆಹ್ವಾನಿತರಾಗಿರುತ್ತಾರೆ.