ಕಾಸರಗೋಡು: ಕಾಸರಗೋಡು ಜಿಲ್ಲೆಯ 60 ವರ್ಷಕ್ಕಿಂತ ಅಧಿಕ ವಯೋಮಾನದ ಹಿರಿಯ ಪ್ರಜೆಗಳು, 45 ವರ್ಷ ಮತ್ತು 59 ವರ್ಷ ಪ್ರಾಯದ ನಡುವಿನ ಗಂಭೀರ ರೋಗಿಗಳಿಗೆ ವಾಕ್ಸಿನ್ ನೀಡಿಕೆ ಸಂಬಂಧ ಕ್ಯಾಂಪೇನ್ ಆರಮಭಿಸಲಾಗಿದೆ.
45 ರಿಂದ 59 ವರ್ಷದ ನಡುವಿನ ವಯೋಮಾನದ ಗಂಭೀರ ರೋಗಿಗಳಿಗೆ ಆಯಾ ಸಂಬಂಧಪಟ್ಟ ವೈದ್ಯಾಧಿಕಾರಿ ದೃಡೀಕರಿಸಿದ ನಿಗದಿತ ದೃಡೀಕರಣ ಪತ್ರ ಸಹಿತ ವಾಕ್ಸಿನೇಷನ್ ಗಾಗಿ ಆಗಮಿಸಬೇಕಿದೆ. ದೃಡೀಕರಣ ಪತ್ರದ ಫಾರ್ಮೆಟ್ ಈ ಲಿಂಕ್ ನಿಂದ ಡೌನ್ ಲೋಡ್ ನಡೆಸಬಹುದು: http://drive.google.com/file/d/1gF2KanQWL-6Q8L2jflebXfvj207EGs/view?usp=sharing
ಕಾಸರಗೋಡು ನಗರಸಭೆ ವ್ಯಾಪ್ತಿಯ ಫಿಷರೀಸ್ ಆಫೀಸ್ ಕಸಬ ಕರಾವಳಿ, ನಗರಸಭೆ ಪುರಭವನ ಇತ್ಯಾದಿ ಕಡೆಗಳಲ್ಲೂ, ಕಾಞಂಗಾಡ್ ನಗರಸಭೆ ವ್ಯಾಪ್ತಿಯ ಜಿಲ್ಲಾ ಆಯುರ್ವೇದ ಆಸ್ಪತ್ರೆ ಪಡನ್ನಕ್ಕಾಡ್, ನಿತ್ಯಾನಂದ ಇಂಗ್ಲೀಷ್ ಮಾಧ್ಯಮ ಶಾಲೆ , ಕುಶಾಲನಗರ ಎಂಬ ಕಡೆಗಳಲ್ಲಿ ಮಾ.16,18,19,20,22 ದಿನಾಂಕಗಳಲ್ಲಿ ಮೆಗಾ ವಾಕ್ಸನೇಷನ್ ಕ್ಯಾಂಪೇನ್ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ವಾಕ್ಸಿನೇಷನ್ ಜರುಗಲಿದೆ ಎಂದವರು ತಿಳಿಸಿದರು.