ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 2019-20 ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾದ ಪ್ರತಿಕಾ ಕೆ. ಅವಳಿಗೆ ಸ್ವರ್ಣಾಂಕುರ ಪ್ರಶಸ್ತಿಯನ್ನು ನೀಡಲಾಯಿತು.
ದಿ.ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಅವರ ಮೊಮ್ಮಗ ಶಿವರಂಜನ್ ಬೇರ್ಕಡವು ಪ್ರತೀವರ್ಷವೂ ಸ್ವರ್ಣಾಂಕುರವನ್ನು ನೀಡುತ್ತಾ ಬಂದಿದ್ದಾರೆ. ಪ್ರಶಸ್ತಿಪತ್ರದೊಂದಿಗೆ ಸ್ಮರಣಿಕೆ ಹಾಗೂ ಚಿನ್ನದ ಪದಕವೂ ಒಳಗೊಂಡಿದೆ. ಪ್ರತಿಕಾ ಕೆ. ಗೋಸಾಡ ವಸಂತ ರೈ ಕೊಳಂಬೆ ಹಾಗೂ ಪ್ರಮೀಳಾ ರೈ ಅವರ ಪುತ್ರಿ. ವೇದಿಕೆಯಲ್ಲಿ ಮಾತೃಸಂಘದ ಅಧ್ಯಕ್ಷೆ ಪ್ರಮೀಳಾ ಗೋಸಾಡ, ಗೋಪಾಲಕೃಷ್ಣ ಭಟ್ ಕಬೆಕ್ಕೋಡು, ಜಯಪ್ರಕಾಶ ಪಜಿಲ, ರಾಜಗೋಪಾಲ ಚುಳ್ಳಿಕ್ಕಾನ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.