HEALTH TIPS

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: 2,085 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು, ಕಾಂಗ್ರೆಸ್ ತೆಕ್ಕೆಗೆ 602 ಕ್ಷೇತ್ರ

            ಅಹ್ಮದಾಬಾದ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, 2,085 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.


        ಇತ್ತೀಚೆಗೆ ಗುಜರಾತ್ ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಇಂದು ಘೋಷಣೆಯಾಗುತ್ತಿದ್ದು, ಕಳೆದ ಭಾನುವಾರ ಗುಜರಾತ್ ನ 31 ಜಿಲ್ಲಾ ಪಂಚಾಯಿತಿಗಳು, 231 ತಾಲ್ಲೂಕು ಪಂಚಾಯಿತಿಗಳು ಮತ್ತು 81 ಪುರಸಭೆಗಳಲ್ಲಿ ಮತ್ತು 23 ಪುರಸಭೆಗಳು ಮತ್ತು3 ತಾಲ್ಲೂಕು ಪಂಚಾಯಿತಿಗಳಲ್ಲಿ ಉಪಚುನಾವಣೆ ನಡೆದಿತ್ತು. ತಾಲ್ಲೂಕು ಪಂಚಾಯಿತಿಗಳಲ್ಲಿ ಸರಾಸರಿ ಶೇ 66.84 ರಷ್ಟು ಮತದಾನವಾಗಿತ್ತು.

        81 ಪುರಸಭೆಗಳು, 31 ಜಿಲ್ಲಾ ಪಂಚಾಯಿತಿಗಳು, ಮತ್ತು 231 ತಾಲ್ಲೂಕು ಪಂಚಾಯಿತಿಗಳ ಫಲಿತಾಂಶ ಪ್ರಕಟವಾಗುತ್ತಿದ್ದು, ಮೂರೂ ಚುನಾವಣೆಗಳಿಂದ ಒಟ್ಟು 8,474 ಕ್ಷೇತ್ರಗಳಲ್ಲಿ ಫಲಿತಾಂಶ ಘೋಷಣೆಯಾಗುತ್ತಿದೆ.

           ವರದಿಯಾಗಿರುವಂತೆ ಒಟ್ಟು 8,474 ಕ್ಷೇತ್ರಗಳ ಪೈಕಿ 2,771 ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ 2,085 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 602 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು 15 ಸ್ಥಾನಗಳಲ್ಲಿ ಆಪ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದು, ಐದು ಸ್ಥಾನಗಳಲ್ಲಿ ಬಿಎಸ್ ಪಿ ಮತ್ತು 42 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

        ಪುರಸಭೆಗಳಲ್ಲಿ ಬಿಜೆಪಿ ಇದುವರೆಗೆ 803 ಸ್ಥಾನಗಳನ್ನು ಮತ್ತು ಕಾಂಗ್ರೆಸ್ -159 ಸ್ಥಾನಗಳನ್ನು ಗೆದ್ದಿದೆ. ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ಈವರೆಗೆ 246 ಮತ್ತು ಕಾಂಗ್ರೆಸ್ 55 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಅಂತೆಯೇ ತಾಲ್ಲೂಕು ಪಂಚಾಯಿತಿಗಳಲ್ಲಿ ಬಿಜೆಪಿ ಈವರೆಗೆ 1,036 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 388 ಸ್ಥಾನಗಳಲ್ಲಿ ಜಯಗಳಿಸಿದೆ.

      2015 ರಲ್ಲಿ ನಡೆದಿದ್ದ ಚುನಾವಣೆ ವೇಳೆ 231 ತಾಲ್ಲೂಕು ಪಂಚಾಯಿತಿಗಳ 4,715 ಸ್ಥಾನಗಳ ಪೈಕಿ ಕಾಂಗ್ರೆಸ್‌ ಪಕ್ಷ 2555 ಸ್ಥಾನಗಳಿಸಿದ್ದರೆ, ಬಿಜೆಪಿ 2019 ಸ್ಥಾನ ಗಳಿಸಿತ್ತು. ಇತರರು 141 ಸ್ಥಾನಗಳು ಪಡೆದಿದ್ದರು. ಉಳಿದಂತೆ 111 ಸ್ಥಾನಗಳಲ್ಲಿ ಬಿಜೆಪಿ, 5 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 1 ಸ್ಥಾನದಲ್ಲಿ ಇತರೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

      ಆ ಸಮಯದಲ್ಲಿ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದ ಪಾಟೀದಾರ್ ಚಳವಳಿಯಿಂದಾಗಿ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಡಿಮೆ ಸ್ಛಾನ ಹೊಂದುವಂತಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries