ಅಹಮದಾಬಾದ್: ಎರಡನೇ ಟಿ20 ಪಂದ್ಯವನ್ನು ಗೆದ್ದ ಭಾರತ, ಐದು ಪಂದ್ಯಗಳ ಸರಣಿಯಲ್ಲಿ ಒಂದು ಒಂದರಿಂದ ಸಮಬಲ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದಕ್ಕೆ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಒಂದು ಓವರ್ ನಿಧಾನವಾಗಿ ಎಸೆದಿತ್ತು. ಹೀಗಾಗಿ ಮ್ಯಾಚ್ ರೆಫರಿ ಜವಾಗಲ್ ಶ್ರೀನಾಥ್ ಆತಿಥೇಯ ತಂಡಕ್ಕೆ ಪೆನಾಲ್ಟಿ ವಿಧಿಸಿದರು.
ಐಸಿಸಿ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ತನ್ನ ನೀತಿ ಸಂಹಿತೆಯ ಪ್ರಕಾರ, ಆಟಗಾರರು ಪಂದ್ಯದ ಪ್ರತಿ ನಿಧಾನಗತಿಯ ಪಂದ್ಯಗಳಿಗೆ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಿದೆ.
ನಿಗದಿತ ಸಮಯಕ್ಕೆ 20 ಓವರ್‌ಗಳನ್ನು ಪೂರ್ಣಗೊಳಿಸದ ಕೊಹ್ಲಿ ಪಡೆ, ಒಂದು ಓವರ್ ಶಾರ್ಟ್ ಇತ್ತು. ಈ ಕಾರಣದಿಂದಾಗಿ ಆತಿಥೇಯರಿಗೆ ಐಸಿಸಿ ದಂಡ ವಿಧಿಸಿದೆ.
ನಿನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ, ಪ್ರವಾಸಿ ಇಂಗ್ಲೆಂಡ್ ತಂಡವನ್ನು 164 ರನ್‌ಗಳಿಗೆ ನಿಯಂತ್ರಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾ 17.5 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿತು. ಆ ಮೂಲಕ 7 ವಿಕೆಟ್‌ಗಳಿಂದ ಸುಲಭ ಗೆಲುವು ಪಡೆದ ಕೊಹ್ಲಿ ಪಡೆ, ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿತು.