ತಿರುವನಂತಪುರ: ರಾಜ್ಯದಲ್ಲಿ ಇಂದು 2133 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೋಝಿಕೋಡ್ 261, ಪತ್ತನಂತಿಟ್ಟು 206, ಎರ್ನಾಕುಳಂ 205, ಕಣ್ಣೂರು 200, ಕೊಟ್ಟಾಯಂ 188, ಮಲಪ್ಪುರಂ 179, ತ್ರಿಶೂರ್ 172, ಆಲಪ್ಪುಳ 168, ಕೊಲ್ಲಂ 152, ಕಾಸರಗೋಡು 117, ತಿರುವನಂತಪುರ 116, ಪಾಲಕ್ಕಡ್ 88, ಇಡುಕ್ಕಿ 46, ವಯನಾಡ್ 35 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರಿಗೂ ಸೋಂಕು ಕಂಡುಬಂದಿಲ್ಲ. ಇದರೊಂದಿಗೆ, ಇತ್ತೀಚೆಗೆ ಯುಕೆ (98) ಮತ್ತು ದಕ್ಷಿಣ ಆಫ್ರಿಕಾ (2) ದಿಂದ ಬಂದ ಒಟ್ಟುಬ 100 ಜನರಿಗೆ ಕೋವಿಡ್ -19 ಇದುವರೆಗೆ ದೃಢಪಡಿಸಲಾಗಿದ್ದು, ಈ ಪೈಕಿ 83 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 69,838 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.3.05 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,21,30,151 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 13 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,355 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 77 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 1862 ಮಂದಿ ಜನರಿಗೆ ಸೋಂಕು ತಗಲಿತು. 180 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 228, ಪತ್ತನಂತಿಟ್ಟು 184, ಎರ್ನಾಕುಳಂ 198, ಕಣ್ಣೂರು 137, ಕೊಟ್ಟಾಯಂ 174, ಮಲಪ್ಪುರಂ 172, ತ್ರಿಶೂರ್ 165, ಆಲಪ್ಪುಳ 163, ಕೊಲ್ಲಂ 148, ಕಾಸರಗೋಡು 109, ತಿರುವನಂತಪುರ 78, ಪಾಲಕ್ಕಾಡ್ 30,ಇಡುಕ್ಕಿ 44, ವಯನಾಡ್ 32 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದ ವಿವರಗಳಾಗಿವೆ.
ಹದಿನಾಲ್ಕು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿರುವುದು ಪತ್ತೆಹಚ್ಚಲಾಗಿದೆ. ಕಣ್ಣೂರು 8, ಎರ್ನಾಕುಳಂ 2, ಕೊಟ್ಟಾಯಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3753 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 193, ಕೊಲ್ಲಂ 543, ಪತ್ತನಂತಿಟ್ಟು 295, ಆಲಪ್ಪುಳ 317, ಕೊಟ್ಟಾಯಂ 498, ಇಡುಕಿ 75, ಎರ್ನಾಕುಳಂ 557, ತ್ರಿಶೂರ್ 241, ಪಾಲಕ್ಕಾಡ್ 57, ಮಲಪ್ಪುರಂ 265, ಕೊಝಿಕೋಡ್ 388, ವಯನಾಡ್ 77, ಕಣ್ಣೂರು 125, ಕಾಸರಗೋಡು 122 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 33,785 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‍ನಿಂದ ಈವರೆಗೆ 10,47,226 ಮಂದಿ ಜನರನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,59,401 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,54,375 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 5,026 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 594 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. 6 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 347 ಹಾಟ್‍ಸ್ಪಾಟ್‍ಗಳಿವೆ.