ಕಾಸರಗೋಡು: ಚುನಾವಣೆ ಸಂಬಂಧ ಸುರಕ್ಷೆ ಪ್ರಕ್ರಿಯೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 2256 ಮಂದಿ ಪೋಲೀಸರ ನೇಮಕ ನಡೆಸಲಾಗುವುದು. ಇದರ ಅಂಗವಾಗಿ 556 ಕೇಂದ್ರ ಸೇನೆಯ ಸದಸ್ಯರೂ ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವರು. 10 ಡಿ.ವೈ.ಎಸ್.ಪಿ.ಗಳು, 23 ಪೋಲೀಸ್ ಇನ್ಸ್ ಸ್ಪೆಕ್ಟರರು, ಎಸ್.ಐ., ಎ.ಎಸ್.ಐ. ರ್ಯಾಂಕ್ ನ 241 ಸಿಬ್ಬಂದಿ, 1982 ಮಂದಿ ಪೋಲೀಸ್ ಕಾನ್‍ಸ್ಟೇಬಲ್ ಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ ಬಿ.ರಾಜೀವ್ ಅವರ ಆದೇಶ ಪ್ರಕಾರ ಆಯಾ ವಲಯಗಳ ಉಸ್ತುವಾರಿ ವಹಿಸುವರು.
ಮತಗಟ್ಟೆಗಳ ಸೇವೆಗಾಗಿ 975 ಮಂದಿ ವಿಶೇಷ ಪೋಲೀಸ್ ಅಧಿಕಾರಿಗಳನ್ನು ನೇಮಿಸಲಾಗುವುದು. ಸೈನ್ಯ, ಪೋಲೀಸ್ ಇಲಾಖೆಯಿಂದ ನಿವೃತ್ತರಾದ, 18 ವರ್ಷ ಪ್ರಾಯ ಪೂರ್ತಿಗೊಂಡಿರುವ ವಿಶೇಷ ಪೋಲೀಸ್ ಕೆಡೆಟ್ ಗಳು, ಎನ್.ಸಿ.ಸಿ. ಕೆಡೆಟ್ ಗಳು ಮತಗಟ್ಟೆಗಳ ಸೇವೆಗೆ ನಿಯುಕ್ತಗೊಳ್ಳಲಿದ್ದಾರೆ. ಅಬಕಾರಿ, ವಿಜಿಲೆನ್ಸ್, ಕ್ರ್ಯಂ ಬ್ರಾಂಚ್, ಅರಣ್ಯ, ಮೋಟಾರು ವಾಹನ ಇಲಾಖೆಗಳ ಸಿಬ್ಬಂದಿಗಳೂ ಪೋಲೀಸರ ಜೊತೆ ಹೊಣೆ ಹಂಚಿಕೊಳ್ಳಲಿದ್ದಾರೆ.