HEALTH TIPS

ಏ. 24ರಂದು ಬಿ.ಟಿ ವಿಜಯನ್ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ

         ಕಾಸರಗೋಡು: ಬಿಜೆಪಿ ಅಣಂಗೂರು ವಲಯ ನೇತೃತ್ವದಲ್ಲಿ ಸ್ವರ್ಗಿಯ ಬಿ.ಟಿ ವಿಜಯನ್ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ ಏಪ್ರಿಲ್ 24 ರಂದು ಕಾಸರಗೋಡಿನಲ್ಲಿ ನಡೆಯಲಿದೆ. 

         ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆ ಅಣ0ಗೂರಿನಲ್ಲಿ ಜರಗಿತು. ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ  ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ  ಪಿ. ಮುರಳಿಧರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.   ವೆಂಕಟರಮಣ ಹೊಳ್ಳ, ಮಾಜಿ ನಗರಸಭೆಯ ಸದಸ್ಯ  ಶಂಕರ,  ವೆಂಕಟೇಶ್, ಅಣ0ಗೂರು ಶ್ರೀ ಶಾರದಾಂಭ ಭಜನಾ ಮಂದಿರದ ಅಧ್ಯಕ್ಷ  ಸೂರಜ್ ಶೆಟ್ಟಿ, ಮೊದಲಾದವರು ಭಾಗವಹಿಸಿದರು. ಸ್ವಾಗತ ಸಮಿತಿಯ ಮುಖ್ಯ ರಕ್ಷಾಧಿಕಾರಿಯಾಗಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರ್,  ರಕ್ಷಾಧಿಕಾರಿಗಳಾಗಿ  ಸಿ.ವಿ. ಪೆÇದುವಾಲ್,  ಪಿ ರಮೇಶ್, ರಾಧಾಕೃಷ್ಣ ಅಣ0ಗೂರು ಇವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ  ನ್ಯಾಯವಾದಿ ಪಿ ಮುರಳಿಧರನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ  ಜ್ಯೋತಿಶ್ ಜೆಪಿ ನಗರ ಹಾಗೂ 501 ಜನರ ಸಮಿತಿ ರಚಿಸಲಾಯಿತು. ವೆಂಕಟೇಶ್ ಸ್ವಾಗತಿಸಿದರು.  ಜ್ಯೋತಿಶ್ ವಂದಿಸಿದರು. 

           ವಿಜೇತ ತಂಡಗಳಿಗೆ ನಗದು ಬಹುಮಾನ ಸಹಿತ ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries