ತಿರುವನಂತಪುರ: ರಾಜ್ಯದಲ್ಲಿ ಇಂದು 2456 ಮಂದಿ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೋಝಿಕೋಡ್ 333, ತಿರುವನಂತಪುರ 300, ಕಣ್ಣೂರು 295, ಎರ್ನಾಕುಲಂ 245, ತ್ರಿಶೂರ್ 195, ಕೊಟ್ಟಾಯಂ 191, ಮಲಪ್ಪುರಂ 173, ಕೊಲ್ಲಂ 153, ಪತ್ತನಂತಿಟ್ಟು 117, ಕಾಸರಗೋಡು 103, ಪಾಲಕ್ಕಾಡ್ 101, ಅಲಪ್ಪುಳ 94, ಇಡುಕ್ಕಿ 86, ವಯನಾಡ್ 70 ಎಂಬಂತೆ ಸೋಂಕು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಅಥವಾ ಬ್ರೆಜಿಲ್‍ನಿಂದ ಬಂದ ಯಾರೊಬ್ಬರಿಗೂ ಕೊರೋನಾವನ್ನು ದೃಢೀಕರಿಸಿಲ್ಲ. ಈವರೆಗೆ ಯುಕೆ (102), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 107 ಜನರಿಗೆ ಸೋಂಕು ಪತ್ತೆಯಾಗಿದ್ದು, ಈ ಪೈಕಿ 101 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಮಾರ್ಪಡಿಸಲ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 56,740 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.4.33 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,28,10,707 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 10 ಮಂದಿ ಸೋಂಕು ಬಾಧಿಸಿದವರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,527 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 105 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2146 ಮಂದಿ ಜನರಿಗೆ ಸೋಂಕು ತಗಲಿತು. 187 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 309, ತಿರುವನಂತಪುರ 230, ಕಣ್ಣೂರು 214, ಎರ್ನಾಕುಳಂ 233, ತ್ರಿಶೂರ್ 184, ಕೊಟ್ಟಾಯಂ 174, ಮಲಪ್ಪುರಂ 161, ಕೊಲ್ಲಂ 150, ಪತ್ತನಂತಿಟ್ಟು 100, ಕಾಸರಗೋಡು 100, ಪಾಲಕ್ಕಾಡ್ 53, ಆಲಪ್ಪುಳ 89, ಇಡುಕ್ಕಿ 83, ವಯನಾಡ್ 66 ಎಂಬಂತೆ ಸಂಪರ್ಕದಿಂದ ಸೋಕು ಬಾಧಿಸಿದೆ.
ಹದಿನೆಂಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 6, ತಿರುವನಂತಪುರ, ಕೋಝಿಕೋಡ್ 3, ಪಾಲಕ್ಕಾಡ್ 2, ಕೊಲ್ಲಂ, ಪತ್ತನಂತಿಟ್ಟು, ಎರ್ನಾಕುಳಂ ಮತ್ತು ತ್ರಿಶೂರ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2060 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 180, ಕೊಲ್ಲಂ 271, ಪತ್ತನಂತಿಟ್ಟು 113, ಆಲಪ್ಪುಳ 127, ಕೊಟ್ಟಾಯಂ 212, ಇಡುಕ್ಕಿ 52, ಎರ್ನಾಕುಳಂ 103, ತ್ರಿಶೂರ್ 219, ಪಾಲಕ್ಕಾಡ್ 103, ಮಲಪ್ಪುರಂ 99, ಕೋಝಿಕೋಡ್ 259, ವಯನಾಡ್ 79, ಕಣ್ಣೂರು 152 ನೆಗೆಟಿವ್ ಆಗಿದೆ. ಇದರೊಂದಿಗೆ 24,268 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,80,803 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,26,817 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,23,124 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3,693 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 437 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 354 ಹಾಟ್‍ಸ್ಪಾಟ್‍ಗಳಿವೆ.