HEALTH TIPS

ರಾಜ್ಯದಲ್ಲಿ ಇಂದು 2475 ಮಂದಿ ಜನರಿಗೆ ಕೊರೋನಾ; 62,486 ಮಾದರಿಗಳ ಪರೀಕ್ಷೆ-ಕಾಸರಗೋಡಲ್ಲಿ ಮತ್ತೆ ಸೋಂಕು ಏರಿಕೆ-ಇಂದು 121 ಮಂದಿಗೆ ಸೋಂಕು ದೃಢ

                           

          ತಿರುವನಂತಪುರ: ರಾಜ್ಯದಲ್ಲಿ ಇಂದು 2475 ಮಂದಿ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೋಝಿಕೋಡ್ 341, ಮಲಪ್ಪುರಂ 283, ಎರ್ನಾಕುಳಂ 244, ಪತ್ತನಂತಿಟ್ಟು 233, ಕೊಲ್ಲಂ 201, ತ್ರಿಶೂರ್ 195, ಕೊಟ್ಟಾಯಂ 180, ತಿರುವನಂತಪುರ 178, ಆಲಪ್ಪುಳ 171, ಕಣ್ಣೂರು 123, ಕಾಸರಗೋಡು 121, ಇಡುಕ್ಕಿ 85, ವಯನಾಡ್ 63, ಪಾಲಕ್ಕಾಡ್ 57 ಎಂಬಂತೆ ಸೋಂಕು ಬಾಧಿಸಿದೆ. 


        ಕಳೆದ 24 ಗಂಟೆಗಳಲ್ಲಿ ಯುಕೆಯಿಂದ ಆಗಮಿಸಿದ ಯಾರಲ್ಲೂ ಸೋಂಕು ದೃಢೀಕರಿಸಲಾಗಿಲ್ಲ. ಇದರೊಂದಿಗೆ, ಕೊರೋನಾ ಇದುವರೆಗೆ ಯುಕೆ (98) ಮತ್ತು ದಕ್ಷಿಣ ಆಫ್ರಿಕಾ (2) ಹೀಗೆ ಒಟ್ಟು 100 ಜನರಿಗೆ ದೃಢಪಡಿಸಲಾಗಿದ್ದು, ಈ ಪೈಕಿ 83 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.

          ಕಳೆದ 24 ಗಂಟೆಗಳಲ್ಲಿ 62,486 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.96 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,20,60,313 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

         ಕಳೆದ 24 ಗಂಟೆಗಳಲ್ಲಿ 14 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4342 ಕ್ಕೆ ಏರಿಕೆಯಾಗಿದೆ. ಇಂದು, ಸೋಂಕು ಪತ್ತೆಯಾದವರಲ್ಲಿ 75 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2235 ಮಂದಿ ಜನರಿಗೆ ಸೋಂಕು ತಗಲಿತು. 153 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 331, ಮಲಪ್ಪುರಂ 272, ಎರ್ನಾಕುಳಂ 234, ಪತ್ತನಂತಿಟ್ಟು 218, ಕೊಲ್ಲಂ 194, ತ್ರಿಶೂರ್ 182, ಕೊಟ್ಟಾಯಂ 172, ತಿರುವನಂತಪುರ 112, ಆಲಪ್ಪುಳ 166, ಕಣ್ಣೂರು 85, ಕಾಸರಗೋಡು 106, ಇಡುಕ್ಕಿ 82, ವಯನಾಡ್ 62,ಪಾಲಕ್ಕಾಡ್ 19 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

       ಹನ್ನೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ದೃಢಪಡಿಸಲಾಗಿದೆ.  ಪಾಲಕ್ಕಾಡ್ 6, ಎರ್ನಾಕುಳಂ, ಕಣ್ಣೂರು ತಲಾ 2, ಕೊಲ್ಲಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಬಾಧಿಇಸದೆ. ರೋಗ ಪತ್ತೆಯಾದ 41.92 ರೋಗಿಗಳ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 250, ಕೊಲ್ಲಂ 250, ಪತ್ತನಂತಿಟ್ಟು 362, ಆಲಪ್ಪುಳ 139, ಕೊಟ್ಟಾಯಂ 281, ಇಡುಕ್ಕಿ 90, ಎರ್ನಾಕುಳಂ 1000, ತ್ರಿಶೂರ್ 264, ಪಾಲಕ್ಕಾಡ್ 130, ಮಲಪ್ಪುರಂ 211, ಕೋಝಿಕೋಡ್ 519, ವಯನಾಡ್ 248, ಕಣ್ಣೂರು 348,ಕಾಸರಗೋಡು 100 ಎಂಬಂತೆ ಪರೀಕ್ಷೆಗಲಲ್ಲಿ ನೆಗೆಟಿವ್ ಆಗಿದೆ. 35,418 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 10,43,473 ಮಂದಿ ಜನರನ್ನು ಕೊರೋನಾದಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,62,766 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,57,648 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 5,118 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 616 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. 4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 351 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries