ಕಾಸರಗೋಡು: ವಿದಾನಸಭೆ ಚುನಾವಣೆ ಪ್ರಚಾರ ಅಂಗವಾಗಿ ರಚಿಸಲಾದ ಮೀಡಿಯಾ ಸರ್ಟಿಫೀಕೇಷನ್ ಆಂಡ್ ಮಾನಿಟರಿಂಗ್ ಕಮಿಟಿ(ಎಂ.ಸಿ.ಎಂ.ಸಿ.) ಅಂಗೀಕಾರಕ್ಕಾಗಿ ಸಲ್ಲಿಸಿರುವ ಜಾಹೀರಾತುಗಳನ್ನು ಪರಿಶೀಲಿಸಿ 24 ತಾಸುಗಳ ಅವಧಿಯಲ್ಲಿ ಸಮಿತಿ ತೀರ್ಮಾನ ಕೈಗೊಳ್ಳಲಿದೆ.
ಟಿ.ವಿ. ಚಾನೆಲ್ ಗಳು, ಕೇಬಲ್ ನೆಟ್ ವರ್ಕ್, ಖಾಸಗಿ ಎಫ್.ಎಂ. ಚಾನೆಲ್ ಸಹಿತ ರೇಡಿಯೋ, ಸಿನಿಮಾ ಥಿಯೇಟರ್ ಗಳು, ಸಾರ್ವಜನಿಕ ಪ್ರದೇಶಗಳು, ಸಾಮಾಜಿಕ ಜಾಲತಾಣಗಳು ಇತ್ಯಾದಿಗಳಲ್ಲಿ ನೀಡುವ ಜಾಹೀರಾತುಗಳನ್ನು ಅಂಗೀಕಾರಕ್ಕಾಗಿ ಎಂ.ಸಿ.ಎಂ.ಸಿ.ಗೆ ಸಲ್ಲಿಸಬೇಕು ಎಂದು ಸಮಿತಿ ಅಧ್ಯಕ್ಷರಾಗಿರು, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಅಂಗೀಕೃತ ರಾಷ್ಟ್ರೀಯ/ ರಾಜ್ಯ ಮಟ್ಟದ ಪಕ್ಷಗಳು, ಅಭ್ಯರ್ಥಿಗಳು, ಮೂರು ದಿನಗಳ ಮುನ್ನ, ಇನ್ನಿತರ ಸಂಘಟನೆಗಳು, ವ್ಯಕ್ತಿಗಳು 7 ದಿನಗಳ ಮುಮಚಿತವಾಗಿ ಅರ್ಜಿ ಸಲ್ಲಿಸಬೇಕು. ವಾಯ್ಸ್ ಮೆಸೆಜ್ ಗೆ ಕೂಡಾ ಪ್ರೀ ಸರ್ಟಿಫಿಕೇಷನ್ ಅಗತ್ಯವಿದೆ.
ಈ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಜಾಹೀರಾತು ಪ್ರಕಟಕ್ಕೆ ನಿಷೇಧ ಸಹಿತ ಕ್ರಮ ಕೈಗೊಳ್ಳುವ ಅಧಿಕಾರ ಸಮಿತಿಗಿದೆ. ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯ ತೀರ್ಮಾನ ವಿರುದ್ಧ ಅರ್ಜಿದಾರರು ರಾಜ್ಯ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಗೆ ಅಪೀಲು ಸಲ್ಲಿಸಬಹುದು.
ಜಾಹೀರಾತಿನ ಇಲೆಕ್ಟ್ರಾನಿಕ್ ಫಾರ್ಮೇಟ್ ನಲ್ಲಿರುವ ಎರಡು ಪ್ರತಿಗಳು, ದೃಡೀಕರಿಸಿರುವ ಟ್ರಾನ್ಸ್ ಸ್ಕ್ರಿಪ್ಟ್ ಅರ್ಜಿಯೊಂದಿಗೆ ಸಲ್ಲಿಸಬೇಕು. ಜಾಹೀರಾತಿನ ನಿರ್ಮಾಣ ವೆಚ್ಚ, ಪ್ರಸಾರ ವೆಚ್ಚ, ಯಾವುದೋ ಅಬ್ಯರ್ಥಿಗಾಗಿ, ರಾಜಕೀಯ ಪಕ್ಷಕ್ಕಾಗಿ ನಡೆಸಿರುವ ಜಾಹೀರಾತು ಎಂಬುದನ್ನು ಖಚಿತಪಡಿಸುವ ನಿಗದಿತ ಫಾರಂ ನಲ್ಲಿ ಅರ್ಜಿ ಸಲ್ಲಿಸಬೇಕು. ಜಾಹೀರಾತು ಪ್ರಕಟದ ವೆಚ್ಚ ಚೆಕ್ ಯಾ ಡಿಡಿ ರೂಪದಲ್ಲಿ ನೀಡುವ ವಿಚಾರವೂ ಇಲ್ಲಿ ತಿಳಿಸಬೇಕು. ವಿದ್ಯುನ್ಮಾನ ಮಾಧ್ಯಮಗಳ ರಾಜಕೀಯ ಜಾಹೀರಾತುಗಳು ಚುನಾವಣೆ ವೆಚ್ಚ ಸಂಬಂಧ ನಿಬಂಧನೆಗಳ ತಳಹದಿಯಲ್ಲಿ ಅವಲೋಕನ ನಡೆಸಲಾಗುವುದು. ಅರ್ಜಿ ಫಾರ್ಮೇಟ್ ಜಿಲ್ಲಾ ವಾರ್ತಾ ಕಚೇರಿಯಲ್ಲಿ ಚಟುವಟಿಕೆ ನಡೆಸುವ ಎಂ.ಸಿ.ಎಂ.ಸಿ. ಘಟಕದಲ್ಲಿ ಲಭ್ಯವಿದೆ.