ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ 42ನೇ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿದ ಭೋಜನ ಶಾಲೆ ಹಾಗೂ ಸಭಾಭವನದ ಲೋಕಾರ್ಪಣಾ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಲಕ್ಕಿಕೂಪನ್ ಬಿಡುಗಡೆ ಸಮಾರಂಭವು ಭಾನುವಾರ ಶ್ರೀಮಂದಿರದಲ್ಲಿ ಜರಗಿತು.
ಉದ್ಯಮಿ ಮಧುಸೂಧನ ಆಯರ್ ಮಂಗಳೂರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಉದ್ಯಮಿ ಬಿ.ಗೋಪಾಲಕೃಷ್ಣ ಪೈ ಬದಿಯಡ್ಕ ಲಕ್ಕಿಕೂಪನ್ ಬಿಡುಗಡೆಗೊಳಿಸಿದರು. ಉತ್ಸವ ಸಮಿತಿ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಶ್ರೀಮಂದಿರದ ಫೇಸ್ ಬುಕ್ ಪೇಜ್‍ನ ಕ್ಯೂ ಆರ್ ಕೋಡ್ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಅಧ್ಯಕ್ಷರು ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಡಾ. ಕೇಶವ ನಾಯ್ಕ್ ಖಂಡಿಗೆ, ಕುಂಞÂಕಣ್ಣ ಮಣಿಯಾಣಿ, ಪ್ರಭಾಕರ ರೈ ಮಠದಮೂಲೆ, ಶಾಂತಾಕುಮಾರಿ ಎಡನೀರು, ಹರಿಪ್ರಸಾದ್ ರೈ ಬದಿಯಡ್ಕ, ಹರೀಶ್ ನಾರಂಪಾಡಿ, ರಾಮಚಂದ್ರ ಭಟ್ ಕೋಳಿಕ್ಕಜೆ, ಡಾ. ಮೋಹನನ್ ಪುಲಿಕೋಡನ್, ರಾಜೇಂದ್ರ ಮವ್ವಾರು ಅತಿಥಿಗಳಾಗಿ ಮಾತನಾಡಿದರು. ಪ್ರೊ. ಶ್ರೀನಾಥ್, ಕೃಷ್ಣಮೂರ್ತಿ ಮವ್ವಾರು, ಡಾ.ವೇಣುಗೋಪಾಲ ಕಳೆಯತ್ತೋಡಿ, ಹರಿನಾರಾಯಣ ಶಿರಂತಡ್ಕ, ನರಸಿಂಹ ಭಟ್ ಕಳೆಯತ್ತೋಡಿ ಶುಭಕೋರಿದರು. ವಸಂತಿ ಟೀಚರ್ ಅಗಲ್ಪಾಡಿ, ಕುಂಞÂರಾಮ ಪದ್ಮಾರು, ರೂಪರಾಜ್ ಪದ್ಮಾರು, ಮೋಹನ್ ಪದ್ಮಾರು, ರವೀಂದ್ರ ಜಯನಗರ ಉಪಸ್ಥಿತರಿದ್ದರು. ಕುಮಾರಿ ವೈಷ್ಣವಿ ಕಲ್ಲಕಟ್ಟ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಚ್ಚುತ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ಎ.25ರಿಂದ ಎ.28ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮವು ನೆರವೇರಲಿದೆ.