ಮಂಜೇಶ್ವರ: ವಿಧಾನಸಭಾ ಚುನಾವಣೆಗೆ ಮುಸ್ಲಿಂಲೀಗ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಘೋಷಿಸಿದೆ. 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಭ್ರಷ್ಟಾಚಾರ ಪ್ರಕರಣದ ಆರೋಪಿ ವಿ.ಕೆ. ಇಬ್ರಾಹಿಂ ಕುಂಞÂ ಮತ್ತು ಕಮರುದ್ದೀನ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಕಳಮಸ್ಸೆರಿಯಲ್ಲಿ ಇಬ್ರಾಹಿಂ ಕುಂಞÂ್ಞ ಅವರನ್ನು ಕೈಬಿಡಲಾಯಿತು ಮತ್ತು ಅವರ ಮಗ ವಿ.ಇ.ಅಬ್ದುಲ್ ಗಪೂರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ 27 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಹೈದರಲಿ ಶಿಹಾಬ್ ಅಭ್ಯರ್ಥಿಗಳನ್ನು ಘೋಷಿಸಿದರು. ಪಕ್ಷದ ಮೇಲೆ ನಿರೀಕ್ಷೆ ಇರಿಸಿದ್ದ, ಜನಮನ್ನಣೆ ಪಡೆದ ಎಲ್ಲಾ ಕಾರ್ಯಕರ್ತರಿಗೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.
ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಬ್ದುಲ್ ಸಮದ್ ಸಮದಾನಿ ಮತ್ತು ರಾಜ್ಯಸಭಾ ಸ್ಥಾನಕ್ಕೆ ಅಬ್ದುಲ್ ವಹಾಬ್ ಸ್ಪರ್ಧಿಸಲಿದ್ದಾರೆ. ಪುನಲೂರು, ಚಡಯಮಂಗಲಂ ಮತ್ತು ಪೆರಾಂಬ್ರಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಇನ್ನಷ್ಟೇ ಘೋಷಿಸಲಾಗುವುದು. 1996 ರ ನಂತರ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಕೋಝಿಕೋಡ್ ದಕ್ಷಿಣ ಕ್ಷೇತ್ರದಲ್ಲಿ ನೂರ್ಬಿನಾ ರಶೀದ್ ಕಣಕ್ಕೆ ಇಳಿಸಲಾಗುತ್ತಿದೆ.
ಮಹಿಳಾ ಲೀಗ್‍ನ ಮಾಜಿ ಅಧ್ಯಕ್ಷೆ ಖಮರುನ್ನಿಸಾ ಅನ್ವರ್ ಹಳೆಯ ಕೋಝಿಕೋಡ್ ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. 1996 ರ ಆ ಬಳಿಕ ಲೀಗ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಇದೇ ಮೊದಲು. ಕುಂದಮಂಗಲಂನಲ್ಲಿ ಕಾಂಗ್ರೆಸ್ ನಾಯಕ ದಿನೇಶ್ ಪೆರುಮಣ್ಣ ಅವರನ್ನು ಯುಡಿಎಫ್ ಸ್ವತಂತ್ರರಾಗಿ ಕಣಕ್ಕಿಳಿಸಿರುವುದು ಅನಿರೀಕ್ಷಿತವಾಗಿತ್ತು.
ಮೂರು ಅವಧಿಯಿಂದ ಸ್ಪರ್ಧಿಸಿದವರನ್ನು ಈಬಾರಿ ಕಣಕ್ಕಿಳಿಸಲಿಲ್ಲ ಎಂದು ಈ ಮೊದಲೇ ಲೀಗ್ ತಿಳಿಸಿತ್ತು. ಇದರಲ್ಲಿ ಕುನ್ಹಾಲಿಕುಟ್ಟಿ, ಎಂ.ಕೆ. ಮುನೀರ್, ಕೆ.ಪಿ.ಎ. ಮಜೀದ್ ಅವರಿಗೆ ವಿನಾಯ್ತಿ ನೀಡಲಾಗಿದೆ. ಮಾಜಿ ಸಚಿವ ಎಂ.ಕೆ. ಮುನೀರ್ ಕೋಝಿಕೋಡ್ ದಕ್ಷಿಣದ ಶಾಸಕರಾಗಿದ್ದವರು ಈ ಬಾರಿ ಕೊಡುವಳ್ಳಿಯಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಕೈತಪ್ಪಿ ಹೋಗಿದ್ದ ತಾನೂರ್ ಕ್ಷೇತ್ರವನ್ನು ಮರಳಿ ಗೆಲ್ಲಲು ಯೂತ್ ಲೀಗ್ ನಾಯಕ ಪಿ.ಕೆ.ಫಿರೋಸ್ ಅವರನ್ನು ಕಣಕ್ಕಿಳಿಸಲಾಗಿದೆ.
ಕುತೂಹಲ ಕೆರಳಿಸಿದ್ದ ಮಂಜೇಶ್ವರದಿಂದ ನಿರೀಕ್ಷೆಯಂತೆ ನಿಕಟಪೂರ್ವ ಬ್ಲಾ.ಪಂ.ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರನ್ನು ಕಣಕ್ಕಿಳಿಸಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ಎನ್.ಎ.ನೆಲ್ಲಿಕುನ್ನು ಅವರನ್ನೇ ಇದೀಗ ಮೂರನೇ ಬಾರಿ ಕಣಕ್ಕಿಳಿಸಲಾಗಿದೆ.
ಅಭ್ಯರ್ಥಿಗಳು
1. ಮಂಜೇಶ್ವರ: ಎ.ಕೆ.ಎಂ. ಅಶ್ರಫ್
2. ಕಾಸರಗೋಡು: ಎನ್.ಎ. ನೆಲ್ಲಿಕುನ್ನು
3. ಅಜಿಕೋಡ್: ಕೆ.ಎಂ. ಶಾಜಿ
4. ಕೂತುಪರಂಬು: ಪೆÇಟ್ಟಂಕಂಡಿ ಅಬ್ದುಲ್ಲಾ
5. ಕುಟ್ಟಿಯಾಡಿ: ಪರಕ್ಕಲ್ ಅಬ್ದುಲ್ಲಾ
6. ಕೋಝಿಕೋಡ್ ದಕ್ಷಿಣ: ನೂರ್ಬೀನಾ ರಶೀದ್
7. ಕುಂದಮಂಗಲಂ: ದಿನೇಶ್ ಪೆರುಮಣ್ಣ (ಯುಡಿಎಫ್ ಸ್ವತಂತ್ರ)
8. ತಿರುವಂಬಾಡಿ: ಸಿ.ಪಿ. ಪುಟ್ಟ ಮುಹಮ್ಮದ್
9. ಮಲಪ್ಪುರಂ: ಪಿ. ಉಬೈದುಲ್ಲಾ
10. ಪಳ್ಳಿಕ್ಕುನ್ನು: ಅಬ್ದುಲ್ ಹಮೀದ್ ಮಾಸ್ಟರ್
11. ಕೊಂಡೊಟ್ಟಿ: ಟಿವಿ. ಇಬ್ರಾಹಿಂ
12. ಎರ್ನಾಡ್: ಪಿಕೆ ಬಶೀರ್
13. ಮಂಜೆರಿ: ಯು.ಎ. ಲತೀಫ್
14. ಪೆರಿಂತಲ್ಮಣ್ಣ: ನಜೀಬ್ ಕಾಂತಪುರಂ
15. ತನೂರ್: ಪಿ.ಕೆ. ಫಿರೋಜ್
16. ಕೊಟ್ಟಾಯಂ: ಕೆ.ಕೆ. ಅಬಿದ್ ಹುಸೇನ್ ತಂಗಲ್
17. ಮಂಗಡ: ಮಂಜಲಂಕುಳ ಅಲಿ
18. ವೆಂಗರಾ: ಪಿ.ಕೆ. ಕುಂಞಲಿ ಕುಟ್ಟಿ
19. ತಿರುರು: ಕುರುಕ್ಕೋಲಿ ಮೊಯಿಥೀನ್
20. ಗುರುವಾಯೂರ್: ಕೆ.ಎನ್.ಎ. ಖಾದರ್
21. ತಿರುರಂಗಾಡಿ: ಕೆ.ಪಿ.ಎ. ಮಜೀದ್
22. ಮನ್ನಾರ್ಕಡ್: ಎನ್. ಶಂಸುದ್ದೀನ್
23. ಕಳಮಸ್ಸೆರಿ: ವಿ.ಇ. ಗಫೂರ್
24. ಕೊಡುವಾಲ್ಲಿ: ಎಂ.ಕೆ. ಮುನೀರ್
25. ಕೊಂಗಡ್: ಯು.ಸಿ. ರಾಮನ್
26. ಪುನಲೂರು / ಚಡಯಮಂಗಲಂ: ನಂತರ ಘೋಷಿಸಲಾಗುವುದು
27. ಪೆರಾಂಬ್ರಾ: ನಂತರ ಘೋಷಿಸಲಾಗುವುದು