ತಿರುವನಂತಪುರ: ರಾಜ್ಯದಲ್ಲಿ ಇಂದು 2765 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೋಝಿಕೋಡ್ 399, ಎರ್ನಾಕುಳಂ 281, ಮಲಪ್ಪುರಂ 280, ತ್ರಿಶೂರ್ 242, ಕೊಟ್ಟಾಯಂ 241, ಕೊಲ್ಲಂ 236, ಆಲಪ್ಪುಳ 210, ಪತ್ತನಂತಿಟ್ಟು 206, ತಿರುವನಂತಪುರ 158, ಕಣ್ಣೂರು 128, ಕಾಸರಗೋಡು 109, ಪಾಲಕ್ಕಾಡ್ 101, ಇಡುಕ್ಕಿ 91, ವಯನಾಡ್ 83 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಯುಕೆಯಿಂದ ಆಗಮಿಸಿದ 4 ಜನರಿಗೆ ಸೋಂಕು ದೃಢಪಡಿಸಲಾಗಿದೆ. ಯುಕೆಯಿಂದ ಇತ್ತೀಚೆಗೆ ಆಗಮಿಸಿದ (98) ಮತ್ತು ದಕ್ಷಿಣ ಆಫ್ರಿಕಾದಿಂದ (1) ಆಗಮಿಸಿದ 99 ಜನರಿಗೆ ಈವರೆಗೆ ಸೋಂಖು ಖಚಿತಪಡಿಸಲಾಗಿದೆ. ಈ ಪೈಕಿ 82 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಲಾದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 59,646 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.4.64 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,16,50,019 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 15 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4241 ಕ್ಕೆ ಏರಿಕೆಯಾಗಿದೆ. ಇಂದು, ಸೋಂಕಿನಿಂದ ಬಳಲುತ್ತಿರುವವರಲ್ಲಿ 70 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 2493 ಜನರಿಗೆ ಸೋಂಕು ತಗಲಿತು. 181 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 380, ಎರ್ನಾಕುಳಂ 262, ಮಲಪ್ಪುರಂ 265, ತ್ರಿಶೂರ್ 235, ಕೊಟ್ಟಾಯಂ 228, ಕೊಲ್ಲಂ 232, ಆಲಪ್ಪುಳ 201, ಪತ್ತನಂತಿಟ್ಟು 184, ತಿರುವನಂತಪುರ 113, ಕಣ್ಣೂರು 89, ಕಾಸರಗೋಡು 94, ಪಾಲಕ್ಕಾಡ್ 45, ಇಡುಕ್ಕಿ 86, ವಯನಾಡ್ 79 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 21 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 7, ಕೋಝಿಕೋಡ್, ಕಾಸರಗೋಡು ತಲಾ 3, ಕೊಲ್ಲಂ, ಪತ್ತನಂತಿಟ್ಟು, ತ್ರಿಶೂರ್ ತಲಾ 2, ಕೊಟ್ಟಾಯಂ ಮತ್ತು ಎರ್ನಾಕುಳಂ ತಲಾ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4031 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 382, ಕೊಲ್ಲಂ 561, ಪತ್ತನಂತಿಟ್ಟು 361, ಆಲಪ್ಪುಳ 112, ಕೊಟ್ಟಾಯಂ 272, ಇಡುಕ್ಕಿ 46, ಎರ್ನಾಕುಳಂ 509, ತ್ರಿಶೂರ್ 307, ಪಾಲಕ್ಕಾಡ್ 111, ಮಲಪ್ಪುರಂ 405, ಕೊಝಿಕೋಡ್ 605, ವಯನಾಡ್ 128, ಕಣ್ಣೂರು 180, ಕಾಸರಗೋಡು 52 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 45,995 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,16,515 ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,98,672 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,91,739 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 6933 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 683 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 358 ಹಾಟ್ಸ್ಪಾಟ್ಗಳಿವೆ.