ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಅನಿವಾರ್ಯ ಸೇವೆ ಸಹಿತ ಆಬ್ಸೆಂಟೀಸ್ ಮತದಾತರು ಮಾ.28ರಿಂದ 30 ವರೆಗೆ ಆಯಾ ವಿಧಾನಸಭೆ ತಳಹದಿಯಲ್ಲಿ ಸಜ್ಜುಗೊಳಿಸಲಾದ ಅಂಚೆ
ಮತದಾನ ಕೇಂದ್ರಗಳಲ್ಲಿ ಮತದಾನ ನಡೆಸಬಹುದು. ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಸಂಬಮಧಪಟ್ಟ ಸಹಾಯಕ ಚುನಾವಣೆ ಅಧಿಕಾರಿಗಳ ಮೇಲ್ನೋಟದಲ್ಲಿ ಅಂಚೆ ಮತದಾನ ಕೇಂದ್ರಗಳು ಚಟುವಟಿಕೆ ನಡೆಸಲಿವೆ. ಆಬ್ಸೆಂಟೀಸ್ ಮತದಾತರು ಅವರ ಸರ್ವೀಸ್ ಗುರುತುಚೀಟಿ ಸಹಿತ ಅಂಚೆ ಮತದಾನ ಕೇಂದ್ರಕ್ಕೆ ಹಾಜರಾಗಿ ಮತದಾನ ನಡೆಸಬೇಕಿದೆ. ಅಂಚೆ ಮತದಾನ ಕೇಂದ್ರಗಳ ಚಟುವಟಿಕೆ ವೀಕ್ಷಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳ ತಮ್ಮ ಏಜೆಂಟರನ್ನು ನೇಮಿಸಲು ಅವಕಾಶಗಳಿವೆ.
ವಿಧಾನಸಭೆ ಕ್ಷೇತ್ರ- ಅಂಚೆ ಮತದಾನ ಕೇಂದ್ರ ಎಂಬ ಕ್ರಮದಲ್ಲಿ :
ಮಂಜೇಶ್ವರ-ಮಂಜೇಶ್ವರ ಬ್ಲೋಕ್ ಪಂಚಾಯತ್ ಕಾರ್ಯಾಲಯ(ಗ್ರೌಂಡ್ ಫೆÇ್ಲೀರ್ ರೂ. ನಂಬ್ರ 7)
ಕಾಸರಗೋಡು : ಕಂದಾಯ ವಿಭಾಗ ಕಚೇರಿ, ಪೆÇೀರ್ಟ್ ಆಫೀಸ್ ಕಟ್ಟಡ.
ಉದುಮಾ : ಉದುಮಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.
ಕಾಞಂಗಾಡ್ : ಕಾಞಂಗಾಡ್ ಬ್ಲೋಕ್ ಪಂಚಾಯತ್ ಕಾರ್ಯಾಲಯ.
ತ್ರಿಕರಿಪುರ : ನೀಲೇಶ್ವರ ಬ್ಲೋಕ್ ಪಂಚಾಯತ್ ಕಾರ್ಯಾಲಯ.