ಕೊಚ್ಚಿ: ಪಡಿತರ ಸೀಮೆಎಣ್ಣೆ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಲೀಟರ್‍ಗೆ 3 ರೂ. ಗಳಷ್ಟು ಬೆಲೆ ಏರಿಸಲಾಗಿದೆ. ಜನವರಿಯಲ್ಲಿ 30 ರೂ.ಗಳಷ್ಟಿದ್ದ ಬೆಲೆ ಇದೀಗ 40 ರೂ.ಗೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಬೆಲೆ ಎರಡು ಹಂತಗಳಲ್ಲಿ ಏರಿಕೆಯಾಗಿ 37 ರೂ.ಗಳಷ್ಟಾಗಿತ್ತು. ಈಗ ಮತ್ತೆ ಹೆಚ್ಚಳಗೊಂಡಿದೆ.
ಕೇಂದ್ರ ಹಂಚಿಕೆ ಕಡಿಮೆ ಇರುವುದರಿಂದ ನೀಲಿ ಮತ್ತು ಬಿಳಿ ಕಾರ್ಡ್‍ದಾರರು ಫೆಬ್ರವರಿಯಲ್ಲಿ ಪಡಿತರ ಸೀಮೆಎಣ್ಣೆಯನ್ನು ಸ್ವೀಕರಿಸಲಿಲ್ಲ.
ಎಎವೈ (ಹಳದಿ) ಮತ್ತು ಆದ್ಯತೆ (ಗುಲಾಬಿ) ವಿಭಾಗಗಳಲ್ಲಿ ವಿದ್ಯುತ್ ಇಲ್ಲದವರಿಗೆ ನಾಲ್ಕು ಲೀಟರ್ ಮತ್ತು ವಿದ್ಯುತ್ ಇರುವವರಿಗೆ ಅರ್ಧ ಲೀಟರ್ ಸೀಮೆಎಣ್ಣೆ ಪ್ರಸ್ತುತ ನೀಡಲಾಗುತ್ತಿದೆ. ಕಳೆದ ತಿಂಗಳು ಸೀಮೆಎಣ್ಣೆ ಖರೀದಿಸದವರು ಈ ತಿಂಗಳು ಹೊಸ ಬೆಲೆ ಪಾವತಿಸಬೇಕಾಗುತ್ತದೆ.