ವಾಷಿಂಗ್ಟನ್: ಈವರೆಗೂ 132 ರಾಷ್ಟ್ರಗಳು ಸೇರಿದಂತೆ ವಿಶ್ವದಾದ್ಯಂತ ಸುಮಾರು 359 ಮಿಲಿಯನ್ ಗೂ ಹೆಚ್ಚು ಡೋಸ್ ಗಳಷ್ಟು ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ.
Our World In Data ನೀಡಿರುವ ಮಾಹಿತಿಯಂತೆ 359,460,397 ಡೋಸ್ ಲಸಿಕೆ ನೀಡಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಮೆರಿಕದಲ್ಲಿ 135,847,835 ಡೋಸ್ ಗಳನ್ನು ಪೂರೈಸಲಾಗಿದ್ದು, 109,081,860 ಡೋಸ್ ನ್ನು ಜನರಿಗೆ ನೀಡಲಾಗಿದೆ. 71,054,445 ಜನರು ಲಸಿಕೆಯ ಒಂದು ಡೋಸ್ ನ್ನು ಪಡೆದುಕೊಂಡಿದ್ದರೆ, 38,335,432 ಜನರು ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ.
ಇಂಗ್ಲೆಂಡ್ ನಲ್ಲಿ 24,453,221 ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ, 1, 610,280 ಜನರು ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಭಾರತದಲ್ಲಿ 3, 29,47,432 ಡೋಸ್ ಗಳನ್ನು ಜನರು ಪಡೆದುಕೊಂಡಿದ್ದಾರೆ. ಈ ಪೈಕಿ 2,70,79,484 ಜನರು ಮೊದಲ ಡೋಸ್ ಪಡೆದಿದ್ದರೆ, 58,67,948 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ಇಸ್ರೇಲ್ ನಲ್ಲಿ 9,374,827 ಜನರು ಲಸಿಕೆ ಪಡೆದಿದ್ದಾರೆ. ಆದಾಗ್ಯೂ, ಯುರೋಪಿಯನ್ ರಾಷ್ಟ್ರಗಳಾದ ಡೆನ್ಮಾರ್ಕ್, ಐಸ್ ಲ್ಯಾಂಡ್, ನಾರ್ವೆಯಲ್ಲಿ ಆಕ್ಸ್ ಫರ್ಡ್ -ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆ ಬಳಕೆಯನ್ನು ನಿರ್ಬಂಧಿಸಿರುವುದರಿಂದ ಲಸಿಕೆ ಪ್ರಮಾಣ ಕಡಿಮೆಯಾಗಿದೆ.