ಕಾಸರಗೋಡು: ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರ ಒಟ್ಟು 36 ನಾಮಪತ್ರ ಸಲ್ಲಿಕೆಯಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಏಳು, ಕಾಸರಗೋಡು ಕ್ಷೇತ್ರರದಲ್ಲಿ ಆರು, ಉದುಮ ಕ್ಷೇತ್ರದಲ್ಲಿ ಏಳು, ಕಾಞಂಗಾಡು ಕ್ಷೇತ್ರದಲ್ಲಿ 10 ಹಾಗೂ ತೃಕ್ಕರಿಪುರ ಕ್ಷೇತ್ರದಲ್ಲಿ ಆರು ನಾಮಪತ್ರ ಸಲ್ಲಿಕೆಯಾಗಿದೆ. ಮಾ 20ರಂದು ನಾಮಪತ್ರಗಳ ಸೂಕ್ಷ್ಮ ತಪಾಸಣೆ ನಡೆಯಲಿದ್ದು, 22ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ.