ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ನಾಮಪತ್ರಿಕೆ ಸಲ್ಲಿಕೆಯ ಕೊನೆಯ ದಿನಾಂಕ ಶುಕ್ರವಾರವಾಗಿದ್ದು, ಅಂದು 36 ಮಂದಿ ಅಭ್ಯರ್ಥಿಗಳು ತಮ್ಮ ನಾಮ ಪತ್ರಿಕೆ ಸಲ್ಲಿಸಿದ್ದಾರೆ.
ಮಂಜೇಶ್ವರ ವಿಧಾನಸಭೆ ಕ್ಷೇತ್ರದಿಂದ 7 ಮಂದಿ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದ್ದಾರೆ. ಬಿ.ಜೆ.ಪಿ.ಯಿಂದ ಕೆ.ಸುರೇಂದ್ರನ್, ಸತೀಶ್ಚಂದ್ರ ಭಂಡಾರಿ, ಮುಸ್ಲಿಂಲೀಗ್ ನಿಂದ ಎಂ.ಅಬ್ಬಾಸ್, ಬಿ.ಎಸ್.ಪಿ.ಯಿಂದ ಸುಂದರ, ಸ್ವತಂತ್ರ ಅಭ್ಯರ್ಥಿಗಳಾದ ಪ್ರವೀಣ್ ಕುಮಾರ್, ಜಾನ್ ಡಿಸೋಜಾ, ಸುರೇಂದ್ರನ್ ಎಂ. ನಾಮಪತ್ರಿಕೆ ಸಲ್ಲಿಸಿದರು.
ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀಕಾಂತ್ ಕೆ., ಹರೀಶ್ ಎಸ್, ಮುಸ್ಲಿಂಲೀಗ್ ನಿಂದ ಮಾಹಿನ್ ಕೇಳೋತ್, ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಮೂವ್ ಮೆಂಟ್ ಪಾರ್ಟಿ ಆಫ್ ಇಂಡಿಯಾದಿಂದ ರಂಜಿತ್ ರಾಜ್ ಎಂ., ಬಿ.ಎಸ್.ಪಿ.ಯಿಂದ ವಿಜಯ ಕೆ.ಪಿ., ಸ್ವತಂತ್ರ ಅಭ್ಯರ್ಥಿ ಸುಧಾಕರನ್ ನಾಮಪತ್ರಿಕೆ ಸಲ್ಲಿಸಿದರು.
ಉದುಮಾ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಬಾಲಕೃಷ್ಣನ್ ಸಿ., ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾದಿಂದ ಗೋವಿಂದನ್ ಬಿ., ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಮೂವ್ ಮೆಂಟ್ ಅಫ್ ಇಂಡಿಯಾದಿಂದ ರಮೇಶನ್ ಕೆ., ಬಿಜೆಪಿ ಅಭ್ಯರ್ಥಿಗಳಾದ ಎ.ವೇಲಾಯುಧನ್, ಜನಾರ್ದನನ್ ಬಿ., ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ಎಂ., ಕುಂಞಂಬು ಕೆ. ನಾಮಪತ್ರಿಕೆ ಸಲ್ಲಿಸಿದರು.
ತ್ರಿಕರಿಪುರ ವಿದಾನಸಭೆ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ.ಜೋಸೆಫ್, ಎಸ್.ಡಿ.ಪಿ.ಐ. ಅಭ್ಯರ್ಥಿ ಲಿಯಾಕತ್ತಾಲಿ, ಸಿಪಿಎಂನಿಂದ ಸಾಬು ಅಬ್ರಾಹಂ, ಅಣ್ಣಾ ಡೆಮೋಕ್ರೆಟಿಕ್ ರೈಟ್ಸ್ ಮೂವ್ ಮೆಂಟ್ ಪಾರ್ಟಿಇ ಆಫ್ ಇಂಡಿಯಾದಿಂದ ಸುಧನ್, ಸ್ವತಂತ್ರ ಅಭ್ಯರ್ಥಿಗಳಾದ ಎಂ.ವಿ.ಜೋಸೆಫ್, ಚಂದ್ರನ್ ಎ.ಕೆ. ನಾಮಪತ್ರಿಕೆ ಸಲ್ಲಿಸಿದರು.