ಕುಂಬಳೆ: ಕಾನ ಶ್ರೀಶಂಕರನಾರಾಯಣ ಮಠದಲ್ಲಿ ವಾರ್ಷಿಕ ಹೊಸ್ತಿನ ದೇವಕಾರ್ಯ ಮತ್ತು ಶ್ರೀಧೂಮಾವತಿ ದೈವದ ಕೋಲ ಏ.3 ಹಾಗೂ 4 ರಂದು ಕೋವಿಡ್ ನಿಯಮಾನುಸಾರ ಸರಳ ಆಚರಣೆಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಏ.2 ರಂದು ಬೆಳಿಗ್ಗೆ 10ಕ್ಕೆ ಕೊಪ್ಪರಿಗೆ ಮುಹೂರ್ತ ನೆರವೇರಲಿದೆ. 3 ರಮದು ಬೆಳಿಗ್ಗೆ 8ಕ್ಕೆ ರುದ್ರ ಪಠಣ, 10.30ಕ್ಕೆ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಸಂಜೆ 7.30ಕ್ಕೆ ಭಂಡಾರದ ಮನೆಯಿಂದ ಶ್ರೀಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀಶಂಕರನಾರಾಯಣ ಮಠಕ್ಕೆ ಆಗಮನ, ಶ್ರೀಶಂಕರನಾರಾಯಣ ದೇವರಿಗೆ ಮಹಾಪೂಜೆ ನಡೆಯಲಿದೆ.
ಏ.4 ರಂದು ಬೆಳಿಗ್ಗೆ 9.30ಕ್ಕೆ ಶ್ರೀಧೂಮಾವತೀ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಗುರುವಾರ ಬೆಳಿಗ್ಗೆ ಗೊನೆ ಮುಹೂರ್ತ ನೆರವೇರಿತು.