HEALTH TIPS

4 ವರ್ಷಗಳಲ್ಲಿ 14,500 ಮಕ್ಕಳ ದತ್ತು ಸ್ವೀಕಾರ

            ನವದೆಹಲಿ: ದೇಶಾದ್ಯಂತ 2017 ರಿಂದ ಈ ವರೆಗೂ 14,500 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಾ.20 ರಂದು ಹೇಳಿದೆ. ಈ ಪೈಕಿ 2,094 ಮಕ್ಕಳನ್ನು ವಿದೇಶಿ ಪ್ರಜೆಗಳು ದತ್ತು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.


       ಲೋಕಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಸಚಿವೆ ಸ್ಮೃತಿ ಇರಾನಿ, 2017-18 ರಲ್ಲಿ 3,276 ಮಕ್ಕಳನ್ನು ಭಾರತೀಯರು ದತ್ತು ಸ್ವೀಕರಿಸಿದ್ದರೆ, 651 ಮಕ್ಕಳನ್ನು ವಿದೇಶಿ ಪೌರರು ದತ್ತು ಪಡೆದಿದ್ದಾರೆ.

2018-19 ರಲ್ಲಿ 3,374 ಮಕ್ಕಳನ್ನು ಭಾರತೀಯರು ದತ್ತು ಪಡೆದಿದ್ದರೆ 653 ಮಕ್ಕಳನ್ನು ವಿದೇಶಿ ಪೌರರು ದತ್ತು ಪಡೆದಿದ್ದಾರೆ. 2019-20 ರಲ್ಲಿ ಭಾರತೀಯರು 3351 ಮಕ್ಕಳನ್ನು ಹಾಗೂ ವಿದೇಶಿ ಪೌರರು 394 ಮಕ್ಕಳನ್ನು, 2020-21 ರಲ್ಲಿ ಮಾ.16 ವರೆಗೂ 2866 ಮಕ್ಕಳನ್ನು ಭಾರತೀಯರು ಹಾಗೂ 394 ಮಕ್ಕಳನ್ನು ವಿದೇಶಿ ಪ್ರಜೆಗಳು ದತ್ತು ಸ್ವೀಕರಿಸಿದ್ದಾರೆ ಎಂದು ಲೋಕಸಭೆಗೆ ಸಚಿವರು ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries