ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಸಲ್ಲಿಸಲಾದ ನಾಮಪತ್ರಿಕೆಗಳ ಸೂಕ್ಷ್ಮ ಪರಿಶೀಲನೆ ಶನಿವಾರ ನಡೆದಿದ್ದು, 41 ಮಂದಿ ಅಭ್ಯರ್ಥಿಗಳು ಕಾಸರಗೋಡು ಜಿಲ್ಲೆಯಲ್ಲಿ ರಂಗದಲ್ಲಿದ್ದಾರೆ.
ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 7, ಕಾಸರಗೋಡು ಕ್ಷೇತ್ರದಲ್ಲಿ 8, ಉದುಮಾದಲ್ಲಿ6, ಕಾಞಂಗಾಡ್ 11, ತ್ರಿಕರಿಪುರದಲ್ಲಿ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರಿಕೆ ಹಿಂತೆಗೆತಕ್ಕೆ ಮಾ.22 ಕೊನೆಯ ದಿನವಾಗಿದೆ.
ಮಂಜೇಶ್ವರ ವಿದಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ವಿ.ವಿ.ರಮೇಶನ್(ಸಿ.ಪಿ.ಎಂ.), ಸುಂದರ(ಬಿ.ಎಸ್.ಪಿ.), ಕೆ.ಸುರೇಂದ್ರನ್(ಬಿ.ಜೆ.ಪಿ.), ಎ.ಕೆ.ಎಂ.ಅಶ್ರಫ್(ಲೀಗ್), ಪ್ರವೀಣ್ ಕುಮಾರ್(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಜಾನ್ ಡಿಸೋಜಾ(ಸ್ವತಂತ್ರ), ಸುರೇಂದ್ರನ್ ಎಂ(ಸ್ವತಂತ್ರ) ರಂಗದಲ್ಲಿದ್ದಾರೆ.
ಕಾಸರಗೋಡು ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ಎನ್.ಎ.ನೆಲ್ಲಿಕುನ್ನು(ಲೀಗ್), ವಿಜಯ ಕೆ.ಪಿ.(ಬಿ.ಎಸ್.ಪಿ.), ಶ್ರೀಕಾಂತ್ ಕೆ.(ಬಿ.ಜೆ.ಪಿ.), ರಂಜಿತ್ ರಾಜ್ ಎಂ.(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಎಂ.ಎ.ಲತೀಫ್(ಐ.ಎನ್.ಎಲ್.), ನಿಷಾಂತ್ ಐ.ಪಿ.(ಸ್ವತಂತ್ರ), ಸುಧಾಕರನ್ ಕೆ.(ಸ್ವತಂತ್ರ).
ಉದುಮಾ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು: ಸಿ.ಎಚ್.ಕುಂಞಂಬು(ಸಿ.ಪಿ.ಎಂ.), ಬಾಲಕೃಷ್ಣನ್ ಸಿ.(ಕಾಂಗ್ರೆಸ್), ಎ.ವೇಲಾಯುಧನ್(ಬಿ.ಜೆ.ಪಿ.), ಗೋವಿಂದನ್ ಬಿ.(ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ), ಕುಂಞಂಬು ಕೆ.(ಸ್ವತಂತ್ರ), ರಮೇಶನ್ ಕೆ.(ಸ್ವತಂತ್ರ).
ಕಾಞಂಗಾಡ್ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು : ಇ.ಚಂದ್ರಶೇಖರನ್(ಸಿ.ಪಿ.ಐ), ಎಂ.ಬಾಲರಾಜ್(ಬಿ.ಜೆ.ಪಿ.), ಸುರೇಶನ್ ಪಿ.ವಿ.(ಕಾಂಗ್ರೆಸ್) ಅಬ್ದುಲ್ ಸಮದ್ ಟಿ.(ಎಸ್.ಡಿ.ಪಿ.ಐ.), ಟಿ.ಅಬ್ದುಲ್ ಸಮದ್(ಜನತಾದಳ ಯುನೈಟೆಡ್), ರೇಷ್ಮಾ ಕರಿವೇಡಗಂ(ಅಣ್ಣಾ ಡೆಮೋಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಆಗಸ್ಟಿನ್(ಸ್ವತಂತ್ರ), ಕೃಷ್ಣನ್ ಪರಪ್ಪಚ್ಚಾಲ್(ಸ್ವತಂತ್ರ), ಮನೋಜ್ ಥಾಮಸ್(ಸ್ವತಂತ್ರ), ಶ್ರೀನಾಥ್ ಶಶಿ ಟಿ.ಸಿ.ವಿ.(ಸ್ವತಂತ್ರ), ಸುರೇಶ್ ಬಿ.ಸಿ.(ಸ್ವತಂತ್ರ).
ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು : ರಾಜಗೋಪಾಲನ್ ಎಂ(ಸಿ.ಪಿ.ಎಂ.), ಷಿಬಿನ್ ಟಿ.ವಿ.(ಬಿ.ಜೆ.ಪಿ.), ಲಿಯಾಕತ್ತಾಲಿ ಪಿ.(ಎಸ್.ಡಿ.ಪಿ.ಐ.), ಮಹೇಶ್ ಟಿ.(ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಸುಧನ್ ಟಿ.(ಅಣ್ಣಾ ಡೆಮೊಕ್ರೆಟಿಕ್ ಹ್ಯೂಮನ್ ರೈಟ್ಸ್ ಪಾರ್ಟಿ ಆಫ್ ಇಂಡಿಯಾ), ಜೋಸೆಫ್ ಎಂ.ಪಿ.(ಸ್ವತಂತ್ರ), ಜಾಯ್ ಜೋನ್(ಸ್ವತಂತ್ರ), ಚಂದ್ರನ್ ಎ.ಕೆ.(ಸ್ವತಂತ್ರ).