HEALTH TIPS

ಬದುಕಿರುವವರದ್ದು ಆಯ್ತು........ಮೃತರಾದವರ ಹೆಸರಲ್ಲೂ ಎರಡು ಮತಗಳು: ಕಳಕೂಟ್ಟಂನಲ್ಲಿ 450 ಕ್ಕೂ ಹೆಚ್ಚು ದ್ವಿಗುಣ ಮತಗಳು ಪತ್ತೆ!

                        

              ತಿರುವನಂತಪುರ: ದ್ವಿ ಮತಕ್ಕೆ ಸಂಬಂಧಿಸಿದ ವಿವಾದ ರಾಜ್ಯದಲ್ಲಿ ಮತ್ತಷ್ಟು ವ್ಯಾಪಿಸಿದೆ. ಕಳಕೂಟಂ ಕ್ಷೇತ್ರದಲ್ಲಿ ಮೃತರಾದವರಿಗೂ ಎರಡು ಮತಗಳಿರುವುದು ಪತ್ತೆಯಾಗಿದೆ. ಧರ್ಮಜನ್ ಹೆಸರಿನಲ್ಲಿ ದ್ವಿಗುಣ ಮತ ಕಂಡುಬಂದಿದೆ. ಕಳಕೂಟ್ಟಂನಲ್ಲಿ ನಡೆದ ಪ್ರಾಥಮಿಕ ತಪಾಸಣೆ ಇದುವರೆಗೆ ಹಲವಾರು ಮೋಸದ ಮತಗಳನ್ನು ಬಹಿರಂಗಪಡಿಸಿದೆ.

        ಕಳೆದ 2020 ರ ಮೇ ಯಲ್ಲಿ ನಿಧನರಾದ ಧರ್ಮಜನ್, ಕಳಕೂಟಂ ಕ್ಷೇತ್ರದ ಕುಲತೂರ್ ನಿವಾಸಿಯಾಗಿದ್ದರು. ಕುಲತೂರ್ ಅಂಚೆ ಕಚೇರಿ ಪ್ರದೇಶದಲ್ಲಿನ ಅವರ ಶಾಶ್ವತ ವಿಳಾಸದಲ್ಲಿರುವ ಮತ ಇನ್ನೂ ಮತದಾರರ ಪಟ್ಟಿಯಲ್ಲಿದೆ. ಧರ್ಮಜನ್ ಅವರ ತಂದೆಯ ಹೆಸರನ್ನು ದಾಖಲಿಸಲಾಗಿದೆ.

       ಅದೇ ವ್ಯಕ್ತಿಯ ಭಾವಚಿತ್ರದೊಂದಿಗೆ ಜಯೇಂದ್ರನ್ ಹೆಸರಿನಿಂದ ಕನಿಯವಿಳಕಂ ಹೆಸರಿನಲ್ಲಿ ಮತ್ತೊಂದು ಮತವಿದೆ. ಅದರಲ್ಲಿ ತಂದೆಯ ಹೆಸರನ್ನು ಚೆಲ್ಲಮ್ಮ ಎಂದು ದಾಖಲಿಸಲಾಗಿದೆ. ಧರ್ಮಜನ್ ಅವರ ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ಎರಡೆರಡು ಮತಗಳು ಹೇಗೆ ದಾಖಲಾಗಿವೆ  ಎಂದು ತಿಳಿದಿಲ್ಲ.

     ಕಳಕೂಟಂನಲ್ಲಿ, ಒಂದೇ ಭಾವಚಿತ್ರ ಬಳಸಿ ವಿವಿಧ ಹೆಸರಿನಲ್ಲಿ ವಿವಿಧ ಬೂತ್‍ಗಳಲ್ಲಿ 450 ಕ್ಕೂ ಹೆಚ್ಚು ಮೋಸದ ಮತಗಳು ಕಂಡುಬಂದಿವೆ. ಮತದಾರರ ಪಟ್ಟಿಯ ವಿವರಗಳ ವಿರುದ್ಧ ಯುಡಿಎಫ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries