ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ತಡೆಗಟ್ಟುವ ಚಟುವಟಿಕೆಗಳು ಸಮರೋಪಾದಿತಯಲ್ಲಿದೆ. ರಾಜ್ಯದಲ್ಲಿ ಇದುವರೆಗೆ ಕೊರೋನಾ ಸಾವಿನ ಸಂಖ್ಯೆ 4,500 ಸನಿಹಕ್ಕೆ ಏರಿಕೆಯಾಗಿರುವುದು ಇದೀಗ ಕಳವಳಕ್ಕೂ ಕಾರಣವಾಗಿದೆ. ಪ್ರಸ್ತುತ, ನಿನ್ನೆಯ ವರದಿಯ ಅನುಸಾರ 4,495 ಮಂದಿ ಜನರು ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಅನಧಿಕೃತ ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದಾಗಿದೆ.
ಕೇರಳದಲ್ಲಿ ಈವರೆಗೆ 11,03,920 ಮಂದಿ ಜನರು ಸೋಂಕಿನಿಂದ ಈಗಲೂ ಬಳಲುತ್ತಿದ್ದಾರೆ. ಒಟ್ಟು 1,875 ಮಂದಿ ಜನರು ಹೊಸದಾಗಿ ಸೋಂಕಿಗೆ ಒಳಗಾಗಿರುವರು. ಇದರೊಂದಿಗೆ ಕೇರಳದಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ 24,620 ಕ್ಕೆ ಏರಿದೆ. ಕಳೆದ ಕೆಲವು ವಾರಗಳಲ್ಲಿ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಮಾಧಾನಕರವಾಗಿದೆ ಎಂದು ವಿಶ್ಲೇಶಿಸಲಾಗುತ್ತಿದ್ದರೂ ಮುಂದಿನ ಸ್ಥಿತಿ ಅಯೋಮಯವೆಂದೇ ತಿಳಿಯಬೇಕಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,28,237 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,24,509 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3,728 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 410 ಜನರನ್ನು ನಿನ್ನೆ ಒಂದೇದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.