HEALTH TIPS

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಕ್ಕೆ ಮೀಸಲು ಶೇ 50 ಮೀರದಿರಲಿ: ಸುಪ್ರೀಂ‌

             ನವದೆಹಲಿ: ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ನಿಗದಿಪಡಿಸುವ ಮೀಸಲಾತಿಯೂ ಒಳಗೊಂಡು ಒಟ್ಟು ಮೀಸಲು ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.


          ಒಬಿಸಿಗೆ ನಿಗದಿಪಡಿಸುವ ಮೀಸಲಾತಿ ಪ್ರಮಾಣವು ನಿರ್ದಿಷ್ಟವಾಗಿರಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಒಳಗೊಂಡು ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಪೀಠವು ವಿವರಿಸಿದೆ.

            ನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕರ್‌ ನೇತೃತ್ವದ ತ್ರಿಸದಸ್ಯರ ಪೀಠವು, ಮಹಾರಾಷ್ಟ್ರ ಜಿಲ್ಲಾ ಪರಿಷತ್‌ ಮತ್ತು ಪಂಚಾಯತ್ ಸಮಿತಿ ಕಾಯ್ದೆ 1961ರನ್ನು ಓದಿ ಹೇಳಿತು. ಇಲ್ಲಿ ಒಬಿಸಿಗೆ ಮೀಸಲಾತಿ ಪ್ರಮಾಣವು ಶೇ 27ರವರೆಗೂ ಇರಬಹುದು. ಆದರೆ, ಒಟ್ಟಾಗಿ ಗರಿಷ್ಠ ಪ್ರಮಾಣ ಶೇ 50ರ ಮಿತಿಯಲ್ಲಿದೆ ಎಂದು ಹೇಳಿತು.

           ಇದೇ ಸಂದರ್ಭದಲ್ಲಿ ಪೀಠವು ಮಹಾರಾಷ್ಟ್ರದ ವಾಶಿಂ, ಅಕೋಲಾ, ನಾಗಪುರ, ಭಂಡಾರ ಜಿಲ್ಲೆಗಳಲ್ಲಿ ಒಬಿಸಿಗೆ ನಿಗದಿಪಡಿಸಿದ್ದ ಸೀಟುಗಳ ಫಲಿತಾಂಶವನ್ನು ಅನೂರ್ಜಿತಗೊಳಿಸಿದ್ದು, ಎರಡು ವಾರಗಳಲ್ಲಿ ಈ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ಘೋಷಿಸಬೇಕು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.

           ಒಬಿಸಿಗೆ ನಿಗದಿಪಡಿಸುವ ಮೀಸಲಾತಿ ಪ್ರಮಾಣವು ಕೇವಲ 'ಶಾಸನಾತ್ಮಕ'. ರಾಜ್ಯಗಳು ರೂಪಿಸುವ ಕಾಯ್ದೆಯಡಿ ಇದನ್ನು ತೀರ್ಮಾನಿಸಬಹುದು. ಆದರೆ ಇದು, ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಇರುವಂತೆ ಸಂವಿಧಾನಿಕ ಮೀಸಲಾತಿ ಆಲ್ಲ. ಈ ವರ್ಗಗಳಿಗೆ ಜನಸಂಖ್ಯೆಯನ್ನು ಆಧರಿಸಿ ಸಾಂವಿಧಾನಿಕ ಮೀಸಲಾತಿಯಂತೆ ನಿಗದಿಯಾಗಲಿದೆ ಎಂದಿತು.

       ಒಂದು ವೇಳೆ, ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನಿಕ ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರೇ ಶೇ 50ರಷ್ಟೂ ಸೀಟುಗಳನ್ನು ಅಥವಾ ಕೆಲ ಶೆಡ್ಯೂಲ್‌ ವಲಯಗಳಲ್ಲಿ ಶೇ 50ರಷ್ಟು ಮೀರಿ ಬಳಸಿದರೆ, ಆಗ ಒಬಿಸಿ ವರ್ಗಕ್ಕೆ ಸೀಟು ಮೀಸಲಾತಿ ನಿಗದಿಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ಪೀಠ ವಿವರಿಸಿತು.

             ಕೆ.ಕೃಷ್ಣಮೂರ್ತಿ (ಡಾ) ವರ್ಸಸ್‌ ಭಾರತ ಸರ್ಕಾರ (2019) ಪ್ರಕರಣ ಕುರಿತು ಸಂವಿಧಾನ ಪೀಠದ ನಿರ್ಧಾರವನ್ನು ಉಲ್ಲೇಖಿಸಿದ ಕೋರ್ಟ್, ಒಬಿಸಿ ವರ್ಗಕ್ಕೆ ಮೀಸಲಾತಿ ನೀಡುವ ಮುನ್ನ ಹಿಂದುಳಿರುವಿಕೆ ಕುರಿತ ಅಂಕಿ ಅಂಶಗಳು, ನಿಗದಿಪಡಿಸುವ ಮೀಸಲು ಪ್ರಮಾಣ, ಆಯೋಗದ ವರದಿಗಳು, ಎಸ್‌ಸಿ, ಎಸ್‌ಟಿ, ಒಬಿಸಿ ಒಟ್ಟು ಪ್ರಮಾಣ ಶೇ 50 ಮೀರದು ಎಂದು ಪರಿಶೀಲಿಸಿ, ಖಾತರಿಪಡಿಸಿಕೊಳ್ಳಲು ನಿಯೋಜಿತ ಆಯೋಗವನ್ನು ರಚಿಸಬೇಕು ಎಂದು ಪೀಠವು ಹೇಳಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries