ತಿರುವನಂತಪುರ: ಪಿಣರಾಯಿ ಸರ್ಕಾರದ ಅವಧಿಯಲ್ಲಿ ಕೇರಳದಲ್ಲಿ ದಾಖಲೆಯ ಮದ್ಯ ಮಾರಾಟವಾಗಿತ್ತು ಎಂದು ಆರ್.ಟಿ.ಐ ದಾಖಲೆ ತಿಳಿಸಿದೆ. ಎಡ ಸರ್ಕಾರದ ಅವಧಿಯಲ್ಲಿ, ನಿಗಮವು ಯುಡಿಎಫ್ ಆಳ್ವಿಕೆಗಿಂತ 17,000 ಕೋಟಿ ರೂ. ಹೆಚ್ಚು ಆದಾಯ ಗಳಿಸಿದೆ. ಕೇರಳದಲ್ಲಿ 65,000 ಕೋಟಿ ಮೌಲ್ಯದ ಮದ್ಯ ಮಾರಾಟ ಕಳೆದ ಐದು ವರ್ಷಗಳಲ್ಲಿ ಆಗಿದೆ.
ಎಡ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮದ್ಯದ ಬೆಲೆಯನ್ನು ಆರು ಪಟ್ಟು ಹೆಚ್ಚಿಸಿದೆ. 2016-17ರಲ್ಲಿ ದಾಖಲೆಯ ಮಾರಾಟ 12,142 ಕೋಟಿ, 2017-18ರಲ್ಲಿ 129.37 ಕೋಟಿ, 2018-19ರಲ್ಲಿ 14,508 ಕೋಟಿ ಮತ್ತು 2019-20ರಲ್ಲಿ 14,700 ಕೋಟಿ ರೂ.ಆಗಿದೆ.
ಅಂದಾಜಿನ ಪ್ರಕಾರ, ಯುಡಿಎಫ್ ಸರ್ಕಾರದ ಅವಧಿಯಲ್ಲಿ ಮದ್ಯ ಮಾರಾಟ 47,624 ಕೋಟಿ ರೂ.ಆಗಿತ್ತು. ಕೊರೊನಾ ಹಣಕಾಸು ವರ್ಷದಲ್ಲಿ ಕೇವಲ 10,340 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರದ ಸರಾಸರಿ ವಾರ್ಷಿಕ ಆದಾಯ ಸುಮಾರು 65,000 ಕೋಟಿ ರೂ.ಗಳಾಗಿವೆ.