ಕಾಸರಗೋಡು: ವಿಧಾನಸಭೆ ಕ್ಷೇತ್ರ ಚುನಾವಣೆ ಅಂಗವಾಗಿ ಅಕ್ರಮ ಹಣ ಸಾಗಣೆ ಇತ್ಯಾದಿ ಪತ್ತೆಗೆ ನೇಮಕಗೊಂಡಿರುವ ಕ್ಷಿಪ್ರದಳ(ಫ್ಲಯಿಂಗ್ ಸ್ಕ್ವಾಡ್) ಶುಕ್ರವಾರ ಕಾಸರಗೋಡು ವಿಧಾನಸಭೆ ಕ್ಷೇತ್ರದ ಬೇವಿಂಜೆ ಎಂಬಲ್ಲಿ ವಾಹನವೊಂದರಲ್ಲಿ ಒಯ್ಯಲಾಗುತ್ತಿದ್ದ , ಸೂಕ್ತ ದಾಖಲಾತಿಗಳಿಲ್ಲದ 76 ಸಾವಿರ ರೂ. ಪತ್ತೆ ಮಾಡಿ ವಶಪಡಿಸಿದೆ. ಕಾರ್ಯಕಾರಿ ನ್ಯಾಯಮೂರ್ತಿ ಕೆ.ಟಿ.ರಶೀದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ವಶಪಡಿಸಲಾದ ನಗದನ್ನು ಕಾಸರಗೋಡು ಟ್ರಷರಿಯಲ್ಲಿ ಇರಿಸಲಾಗಿದೆ.