ನವದೆಹಲಿ: ಅಸ್ಸಾಂನಲ್ಲಿ ಸಂಜೆ 6 ಗಂಟೆಯ ವೇಳೆಗೆ ಶೇ 72.14ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಶೇ 79.79 ರಷ್ಟು ಮತದಾನ ದಾಖಲಾಗಿದೆ.
ಅಸ್ಸಾಂನಲ್ಲಿ ಎರಡು ಹಂತದ ಮತದಾನದ ಪೈಕಿ ಮೊದಲ ಹಂತದಲ್ಲಿ 47 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ಮತದಾನ ನಡೆಯಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಭಾರಿ ಪ್ರಮಾಣದ ಮತದಾನ ನಡೆದಿರುವುದು, ಆಡಳಿತಾರೂಢ ಬಿಜೆಪಿ ಅಥವಾ ವಿರೋಧ ಪಕ್ಷಗಳಿಗೆ ಅನುಕೂಲವಾಗಲಿದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೆಲವರು ಮತದಾನವನ್ನು ಬಿಜೆಪಿಗೆ ಅನುಕೂಲಕರವೆಂದು ಭಾವಿಸಿದರೆ, ಇತರರು ಆಡಳಿತಾರೂಡ ತೃಣಮೂಲ ಕಾಂಗ್ರೆಸ್ ಪರ ಸಕಾರಾತ್ಮಕ ಅಲೆ ಎಂದು ಪರಿಗಣಿಸಿದ್ದಾರೆ.