HEALTH TIPS

ಭಾರತದ ಏಳು ರಾಜ್ಯಗಳಲ್ಲಿ ಶೇ. 87.73ರಷ್ಟು ಹೊಸ ಕೋವಿಡ್‌ ಪ್ರಕರಣಗಳು

         ನವದೆಹಲಿ: 'ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೈನಂದಿನ ಪ್ರಕರಣಗಳ ಪೈಕಿ ಈ ಏಳು ರಾಜ್ಯಗಳು ಸೇರಿ ಶೇಕಡ 87.73 ಪ್ರಕರಣ ವರದಿಯಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.


        ಮಹಾರಾಷ್ಟ್ರದಲ್ಲಿ ಹೊಸದಾಗಿ 15,602 ಪ್ರಕರಣಗಳು ವರದಿಯಾಗಿವೆ. ಇದು ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಕೇರಳದಲ್ಲಿ 2,035 ಮತ್ತು ಪಂಜಾಬ್‌ನಲ್ಲಿ 1,510 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

        ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.10 ಲಕ್ಷ ತಲುಪಿದ್ದು, ಇದರಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್‌ ಶೇಕಡ 76.93 ರಷ್ಟು ಭಾಗವನ್ನು ಹೊಂದಿದೆ. ದೇಶದಲ್ಲಿ ಈವರೆಗೆ 1,09,89,897 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರತಿನಿತ್ಯ ಸುಮಾರು 16,637 ಮಂದಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಆರು ರಾಜ್ಯಗಳು ಶೇಕಡ 83.13 ರಷ್ಟು ಪಾಲನ್ನು ಹೊಂದಿದೆ.

ಆರು ರಾಜ್ಯಗಳು ಶೇಕಡ 84.47 ರಷ್ಟು ಸಾವಿನ ಪ್ರಮಾಣವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಹೊಸದಾಗಿ 88 ಮಂದಿ ಸಾವಿಗೀಡಾಗಿದ್ದರೆ, ಪಂಜಾಬ್‌ನಲ್ಲಿ 22 ಹಾಗೂ ಕೇರಳದಲ್ಲಿ 12 ಮಂದಿ ಮೃತಪಟ್ಟಿದ್ಧಾರೆ.

      ಈವರೆಗೆ 2,97,38,409 ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ. 73,47,895 ಆರೋಗ್ಯ ಕಾರ್ಯಕರ್ತರು ಮತ್ತು 11,35,573 ಮಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌ ನೀಡಲಾಗಿದೆ. 42,95,201 ಆರೋಗ್ಯ ಕಾರ್ಯಕರ್ತರು ಮತ್ತು 73,32,641 ಮಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್‌ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries