ತಿರುವನಂತಪುರ: ನಕ್ಸಲ್ ಪೀಡಿತ ರಾಜ್ಯದ 9 ಕ್ಷೇತ್ರಗಳ ಕೆಲವು ಬೂತ್‍ಗಳಲ್ಲಿ ಸಂಜೆ 6 ಗಂಟೆಯವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂಬತ್ತು ವಿಧಾನಸಭಾ ಕ್ಷೇತ್ರಗಳ 298 ಬೂತ್‍ಗಳಲ್ಲಿ ಮತದಾನದ ಅವಧಿ ಕಡಿತಗೊಳಿಸಲಾಗಿದೆ.
ವಯನಾಡ್ ಜಿಲ್ಲೆಯ ಮಾನಂದವಾಡಿ, ಸುಲ್ತಾನ್ ಬತ್ತೇರಿ ಮತ್ತು ಕಲ್ಪೆಟ್ಟಾ, ಮಲಪ್ಪುರಂನ ಏರ್ನಾಡ್, ನೀಲಂಬೂರು ಮತ್ತು ವಂಡೂರು ಹಾಗೂ ಪಾಲಕ್ಕಾಡ್ ಜಿಲ್ಲೆಯ ಕೊಂಗಾಡ್, ಮನರ್ಕಾಡ್ ಮತ್ತು ಮಲಂಪುಳ ಕ್ಷೇತ್ರಗಳಲ್ಲಿ ಮತದಾನದ ಅವಧಿ ಕಡಿತಗೊಳಿಸಲಾಗಿದೆ.
ನಕ್ಸಲ್ ಬೆದರಿಕೆ ಇರುವ ಕ್ಷೇತ್ರಗಳಲ್ಲಿ ಕೇಂದ್ರ ಸೇನೆಯ ನೇತೃತ್ವದಲ್ಲಿ ಚುನಾವಣೆಗಳು ನಡೆಯಲಿವೆ. ಏಪ್ರಿಲ್ 6 ರಂದು ಕೇರಳದಲ್ಲಿ ಚುನಾವಣೆ ನಡೆಯಲಿವೆ. ಕೊರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಾಮಾನ್ಯ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.