ಸಮರಸ ಚಿತ್ರ ಸುದ್ದಿ: ಮಧೂರು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೇಟಿ ನೀಡಿ ಆಶೀರ್ವಚನ ನೀಡಿದರು. ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಪ್ರಧಾನ ಅರ್ಚಕ ಶ್ರೀಪತಿ ಅಡಿಗ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಿರಿಯ ಪತ್ರಕರ್ತ ಸಾಹಿತಿ ಮಲಾರ್ ಜಯರಾಮ ರೈ, ಸಂಘಟಕ ಜಗದೀಶ್ ಕೂಡ್ಲು, ವೆಂಕಟ್ ಭಟ್ ಎಡನೀರು, ಸೂರ್ಯ ಭಟ್ ಎಡನೀರು, ರವಿರಾಜ ಅಡಿಗ, ನಾರಾಯಣ ಅಡಿಗ ಮೊದಲಾದವರು ಜೊತೆಗಿದ್ದರು.