ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಮತ್ತು ಆಫ್ಘಾನಿಸ್ತಾನದ ಸ್ವಾಯತ್ತ ಆಡಳಿತಾತ್ಮಕ ಸುಧಾರಣೆಗಳು ಮತ್ತು ನಾಗರಿಕ ಸೇವೆಗಳ ಆಯೋಗದ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನಮೋದನೆ ನೀಡಲಾಗಿದೆ.
ಭಾರತದ ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ಮತ್ತು ಆಫ್ಘಾನಿಸ್ತಾನದ ಸ್ವಾಯತ್ತ ಆಡಳಿತಾತ್ಮಕ ಸುಧಾರಣೆಗಳು ಮತ್ತು ನಾಗರಿಕ ಸೇವೆಗಳ ಆಯೋಗ (ಐ.ಎ.ಆರ್.ಸಿ.ಎಸ್.ಸಿ) ಗಳ ನಡುವೆ ತಿಳಿವಳಿಕೆ ಪತ್ರ(ಎಂಒಯು) ಕ್ಕೆ ಸಹಿ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಈ ಎಂಒಯು ನಿಂದ ಯು.ಪಿ.ಎಸ್.ಸಿ ಮತ್ತು ಐ.ಎ.ಆರ್.ಸಿ.ಎಸ್.ಸಿ ನಡುವಿನ ಬಾಂಧವ್ಯ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ನೇಮಕಾತಿ ವಲಯದಲ್ಲಿ ಎರಡೂ ಬದಿಯಿಂದ ಅನುಭವ ಮತ್ತು ತಜ್ಞತೆಯನ್ನು ವಿನಿಮಯ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ.