ತಿರುವನಂತಪುರ: ಕಳಕೂಟಂ ಕ್ಷೇತ್ರದಲ್ಲಿ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ತಾನು ಸ್ಪರ್ಧೆಗಿಳಿಯುವೆ ಎಂದು ಶೋಭಾ ಸುರೇಂದ್ರನ್ ಸುಳಿವು ನೀಡಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ನಂಬಿಕೆ ಅನಿವಾರ್ಯ. ಆ ನಂಬಿಕೆಗಳ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಮತ್ತು ಅಸಂಖ್ಯ ಭಕ್ತರನ್ನು ನೋಯಿಸಿದವರು ಕಡಕಂಪಲ್ಲಿ ಸುರೇಂದ್ರನ್. ಅಂತಹ ವ್ಯಕ್ತಿಯ ವಿರುದ್ಧ ಸ್ಪರ್ಧಿಸಬೇಕೆಂಬ ಬೇಡಿಕೆಯಿಂದಾಗಿ ತಾನು ಈ ಬಾರಿ ಸ್ಪರ್ಧಿಸುತ್ತಿಲ್ಲ ಎಂಬ ನಿಲುವನ್ನು ಬದಲಾಯಿಸಿದ್ದೇನೆ ಎಂದು ಶೋಭಾ ಸುರೇಂದ್ರನ್ ಹೇಳಿದ್ದಾರೆ.
ಕೇರಳದ ಜನಸಾಮಾನ್ಯರಿಗೆ, ಮತ್ತು ಎಲ್ಲಾ ಭಕ್ತರಿಗೆ ಸ್ಪರ್ಧಿಸುವ ಅಗತ್ಯತೆಯ ಬಗ್ಗೆ ತಿಳಿದಿದೆ. ದೇವಸ್ವಂ ಸಚಿವರೂ, ಮಂಡಲದ ಉಸ್ತುವಾರಿ ಸಚಿವರೂ ಆದ ಕಡಗಂಪಳ್ಳಿ ಕಳಕೂಟಂನಲ್ಲಿ ಸ್ಪರ್ಧಿಸುತ್ತಿದ್ದಾರೆ ಮತ್ತು ಅವರ ನಿಲುವು ಭಕ್ತರ ವಿರುದ್ಧವಾದುದು ಎಂದು ಜನರಿಗೆ ಈಗಾಗಲೇ ಮನವರಿಕೆಯಾಗಿದೆ. ಅದಕ್ಕಾಗಿಯೇ ಅಂತವರ ವಿರುದ್ದ ಸ್ಪರ್ಧೆಗೆ ಅವಕಾಶವಿದೆ ಎಂದು ಶೋಭಾ ಸುರೇಂದ್ರನ್ ಹೇಳಿದರು.
ಪ್ರತಿಭಾವಂತ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಂಗ್ರಹಿಸಿದೆ. ಶೋಭಾ ಸುರೇಂದ್ರನ್ ಸ್ಪರ್ಧೆಗಿಳಿಯಲು ಆಸಕ್ತರಾಗಿದ್ದಾರೆ. ಅವರು ಇಂದು ಅಥವಾ ನಾಳೆ ಅಂಗಮಾಲಿಯಲ್ಲಿ ಅಭ್ಯರ್ಥಿಗಳ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ನಿಮಿಷವೂ ಅಭಿಯಾನದಲ್ಲಿ ಸಕ್ರಿಯವಾಗಿರುವ ಈ ಪರಿಸ್ಥಿತಿಯಲ್ಲಿ ತನ್ನ ಅಭ್ಯರ್ಥಿತನದ ಬಗ್ಗೆ ಮತ್ತೆ ಮತ್ತೆ ಚರ್ಚಿಸುವ ಅಗತ್ಯವಿಲ್ಲ ಎಂದು ಶೋಭಾ ಸುರೇಂದ್ರನ್ ಹೇಳಿರುವರು.