HEALTH TIPS

ಕೇರಳ ಚುನಾವಣೆ: ಪ್ರಚಾರದ ಕಾರ್ಯತಂತ್ರ ರೂಪಿಸಲು ಕರ್ನಾಟಕ ಕರಾವಳಿ ಬಿಜೆಪಿ ಪಡೆ ನೆರವು

       ಮಂಗಳೂರು: ಕೇರಳದಲ್ಲಿ ಮತಗಳನ್ನು ಗಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ತನ್ನ ಚುನಾವಣಾ ಪ್ರಚಾರದ ನಿರ್ವಹಣೆಯನ್ನು ನೋಡಿಕೊಳ್ಳಲು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಿಂದ ಮೂರು ಡಜನ್‌ಗೂ ಹೆಚ್ಚು ಪಕ್ಷದ ಮುಖಂಡರನ್ನು ನಿಯೋಜಿಸಿದೆ.


        ಹಾಲಿ ಮತ್ತು ಮಾಜಿ ಶಾಸಕರು ಕೇರಳದ 38ವಿಧಾನಸಭೆ ಕ್ಷೇತ್ರಗಳಲ್ಲಿಅದರಲ್ಲೂ ವಿಶೇಷವಾಗಿ ಕೇರಳ ಕರಾವಳಿ ತೀರದಲ್ಲಿ ಪಕ್ಷ ಉತ್ತಮ ಮತಗಳಿಸಲು ಯೋಜನೆ ರೂಪಿಸುತ್ತಿದೆ. ಕೊಣ್ಣಿ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಕರ್ನಾಟಕದ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರಿಗೆ ವಹಿಸಲಾಗಿದೆ.

         ಪತ್ತನಂತಿಟ್ಟು ಜಿಲ್ಲೆಯ ಕೊಣ್ಣಿ ಕ್ಷೇತ್ರದಿಂದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧಿಸುವ ಸಾಧ್ಯತೆಯಿದೆ. ಕೇರಳ ಕರಾವಳಿ ತೀರದ ಜನತೆ ಜೊತೆ ಸುರೇಂದ್ರನ್ ಅವರಿಗೆ ಉತ್ತಮ ಸಂಬಂಧವಿದೆ ಹೀಗಾಗಿ ಈ ಕ್ಷೇತ್ರ ಆಯ್ದುಕೊಳ್ಳುವ ಸಾಧ್ಯತೆಯಿದೆ.

        ನನ್ನ ಕೆಲಸ ಮೇಲ್ವಿಚಾರಣೆ ಮಾಡುವುದಲ್ಲ, ಮತದಾನ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರೊಂದಿಗೆ ಬೂತ್‌ಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕೆಲಸ ಮಾಡುವುದು, ಮನೆ-ಮನೆಗೆ ಭೇಟಿ ನೀಡಿ, ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ ಅವರಿಂದ ಮತದಾರರನ್ನು ತಲುಪುವುದಾಗಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

        ಬಿಜೆಪಿ ಶಾಸಕರಾದ ಮಂಗಳೂರು ನಗರದ (ದಕ್ಷಿಣ) ವೇದವ್ಯಾಸ್ ಕಾಮತ್ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಶುಕ್ರವಾರ ಕೇರಳಕ್ಕೆ ತೆರಳಿದ್ದು ಸೋಮವಾರ ಅಧಿವೇಶನಕ್ಕೆ ವಾಪಸಾಗುವ ಸಾಧ್ಯತೆಯಿದೆ.

       ವೇದವ್ಯಾಸ್ ಕಾಮತ್ ಅವರಿಗೆ ತೃಶೂರ್ ಉಸ್ತುವಾರಿ ನೀಡಲಾಗಿದೆ. ಮೂರು ಜಿಲ್ಲೆಗಳ ಎಲ್ಲಾ ಬಿಜೆಪಿ ಶಾಸಕರನ್ನು ಕೇರಳ ಚುನಾವಣೆಗಾಗಿ ನಿಯೋಜಿಸಲಾಗಿದೆ. ಕರ್ನಾಟಕ ಕರಾವಳಿ ಬಿಜೆಪಿ ನಾಯಕರು ಕೇರಳ ಚುನಾವಣೆಗಾಗಿ ಯೋಜನೆ ರೂಪಿಸುತ್ತಿದ್ದಾರೆ.

         ಇಂಗ್ಲಿಷ್ ಅಥವಾ ಮಲಯಾಳಂನಲ್ಲಿ ಮಾತನಾಡುವ ಕಾರ್ಯಕರ್ತರಿಗೆ ಕಣ್ಣೂರಿನಿಂದ ಮುಂದಿನ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದ್ದು, ಉಳಿದವರು ಮುಖ್ಯವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕೆಲಸ ಮಾಡುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ ಸುದರ್ಶನ್ ತಿಳಿಸಿದ್ದಾರೆ.

         ಚುನಾವಣೆಯ ಕೊನೆಯ 10 ದಿನಗಳಲ್ಲಿ ಕರ್ನಾಟಕದಲ್ಲಿ ತಾಲೂರು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗದಿದ್ದರೇ ರಾಜ್ಯದ ಹಲವು ಪ್ರಮುಖ ಬಿಜೆಪಿ ನಾಯಕರು ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ಸುದರ್ಶನ್ ತಿಳಿಸಿದ್ದಾರೆ. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರಿಗೆ ಕೇರಳ ಬಿಜೆಪಿ ಉಸ್ತುವಾರಿ ನೀಜಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries