HEALTH TIPS

ಚೀನಾ ಲಸಿಕೆ ಪಡೆದ ನಂತರವೂ ಪಾಕ್ ಅಧ್ಯಕ್ಷರನ್ನು ಬಿಡದ ಕೋರೋನಾ ಸೋಂಕು!

      ಇಸ್ಲಾಮಾಬಾದ್: ಕೊರೋನಾ ಲಸಿಕೆ ಹಾಕಿಸಿಕೊಂಡ ಮರುದಿನವೇ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

      ತಮಗೆ ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಸ್ವತಃ ಆರಿಫ್ ಅಲ್ವಿ ಅವರೇ ಟ್ವೀಟ್ ಮಾಡಿದ್ದಾರೆ. ನಾನು ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಂಡಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ತಮ್ಮ ಆರೋಗ್ಯದ ಬಗ್ಗೆ ಬರೆದುಕೊಂಡಿದ್ದಾರೆ.

     "ನನಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಿಂದ ಗೊತ್ತಾಗಿದೆ. ಕೊವಿಡ್-19 ಸೋಂಕಿತರ ಮೇಲೆ ಅಲ್ಲಾನ ಕೃಪೆ ಇರುತ್ತದೆ. ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ ಸಂದರ್ಭದಲ್ಲಿ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರಕ್ರಿಯೆ ಆರಂಭವಾಗುವುದಿಲ್ಲ. ಎರಡನೇ ಡೋಸ್ ಲಸಿಕೆ ನಂತರದಲ್ಲಿ ಈ ಕ್ರಿಯೆ ಶುರುವಾಗಲಿದೆ. ದಯವಿಟ್ಟು ಕೊರೊನಾವೈರಸ್ ಬಗ್ಗೆ ಎಲ್ಲರೂ ಜಾಗೃತರಾಗಿರಿ ಎಂದು ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

     ಇದೇ ತಿಂಗಳ ಆರಂಭದಲ್ಲಿ ಆರಿಫ್ ಅಲ್ವಿ ಮತ್ತು ಪತ್ನಿ ಸಮಿನಾ ಅಲ್ವ ಚೀನಾ ಲಸಿಕೆ ಸಿನೋಫಾರ್ಮ್ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries