ಕಾಸರಗೋಡು: ಮಹಿಳೆಯರು ಕೃಷಿವಲಯದಲ್ಲಿ ತಮ್ಮನ್ನು ಹೆಚ್ಚಿನ ಸಂಖ್ಯೆಯಲ್ಲಿತೊಡಗಿಸಿಕೊಳ್ಳುವ ಮೂಲಕ ಸಮೂಹದ ಸಬಲೀಕರಣದಲ್ಲಿ ಕೈಜೋಡಿಸಬೇಕು ಎಂದು ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ತಿಳಿಸಿದ್ದಾರೆ.
ಅವರು ಸಿಪಿಸಿಆರ್‍ಐ ವತಿಯಿಂದ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಯವ ಕೃಷಿ ತಜ್ಞೆ ಡಾ. ಅಶ್ವಿನಿ ಕೃಷ್ಣಮೂರ್ತಿ ಅಡ್ಯನಡ್ಕ ವಾರಣಾಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಉದ್ಯಮಿಗಳಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಹಾಗೂ ತಮಿಳ್ನಾಡಿನ ಜಿ. ಗೋಮತಿ ಅವರನ್ನು ಸನ್ಮಾನಿಸಲಾಯಿತು. ಸಿಪಿಸಿಆರ್‍ಐ ವಿಜ್ಞಾನಿ ಡಾ. ಸರಿತಾ ಹೆಗ್ಡೆ ಅವರು ಉತ್ತಮ ಆರೋಗ್ಯಕ್ಕಾಗಿ ಸ್ವದೇಶಿ ನಿರ್ಮಿತ ಆಹಾರ ವಸ್ತುಗಳು ಎಂಬ ವಿಷಯದಲ್ಲಿ ತರಗತಿ ನಡೆಸಿದರು. 30ಕ್ಕೂ ಹೆಚ್ಚು ಮಹಿಳಾ ಕೃಷಿಕರು, ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು. ಮಹಿಳಾ ಸೆಲ್‍ನ ಅಧ್ಯಕ್ಷೆ ಡಾ. ವಿ. ನಿರಾಲ್ ಸ್ವಾಗತಿಸಿದರು. ಡಾ. ವಿ.ಸೆಲ್ವಮಣಿ ವಂದಿಸಿದರು.