ಕಾಸರಗೋಡು: ಚುನಾವಣಾ ನಿರೀಕ್ಷಕ, ನಿವೃತ್ತ ಡಿಜಿಪಿ ದೀಪಕ್ ಮಿಶ್ರಾ ಶುಕ್ರವಾರ ಕಾಸರಗೋಡಿಗೆ ಭೇಟಿ ನೀಡಿದರು. ಪೆರಿಯ ಕೇಂದ್ರೀಯ ವಿಶ್ವ ವಇದ್ಯಾಲಯದ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ರಸ್ತೆಹಾದಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲೆಯ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ರಾಜೀವ್, ಚುನಾವಣಾ ವಿಭಾಗದ ಅಧಿಕಾರಿಗಳು ಜತೆಗಿದ್ದರು. ಪೆರಿಯ ಕಲ್ಯೋಟ್‍ನ ಅವಳಿಕೊಲೆ ನಡೆದ ಪ್ರದೇಶಕ್ಕೂ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಾಮರ್ಶೆ ನಡೆಸಿದರು.
ಇದೇ ಸಂದರ್ಭ ಚುನಾವಣಾ ಖರ್ಚುವೆಚ್ಚಗಳ ನಿಗಾವಹಿಸಲಿರುವ ವಿಶೇಷ ಹಣಕಾಸು ಅಧಿಕಾರಿ, ಕೇಂದ್ರ ಚುನಾವಣಾ ಆಯೋಗದ ಮಾಜಿ ನಿರೀಕ್ಷಕ ಪುಷ್ಪೀಂದರ್ ಸಿಂಗ್ ಪೂನಿಯ ಜಿಲ್ಲೆಗೆ ಭೇಟಿನೀಡಿದರು. ಕಾಸರಗೋಡು ಹಾಗೂ ಮಂಜೇಶ್ವರ ಮಂಡಲದ ಖರ್ಚುವೆಚ್ಚ ನಿರೀಕ್ಷಕ ಸಾನ್‍ಜೋಯ್‍ಪಾಲ್ ಹಾಗೂ ತೃಕ್ಕರಿಪುರ, ಕಾಞಂಗಾಡು, ಉದುಮ ವಿಧಾನಸಭಾ ಕ್ಷೇತ್ರದ ನಿರೀಕ್ಷಕ ಸತೀಶ್‍ಕುಮಾರ್ ಜೊತೆಗಿದ್ದರು.