ತ್ರಿಶೂರ್: ವಸ್ತು ಪ್ರದರ್ಶನಕ್ಕೆ ಸಂದರ್ಶಕರಿಗೆ ಹೇರಿರುವ ನಿಬಂಧನೆಗಳಿಗೆ ವಿನಾಯ್ತಿ ನೀಡಿದರೆರಷ್ಟೇ ಪೂರಂ ನಡೆಸುವುದಾಗಿ ತ್ರಿಶೂರ್ ಪೂರಂ ಸಂಘಟನಾ ಸಮಿತಿ ಪಟ್ಟುಹಿಡಿದಿದೆ. ಏಕಕಾಲದಲ್ಲಿ 200 ಮಂದಿಗೆ ಮಾತ್ರ ಪ್ರವೇಶವೆಂಬ ಕಾನೂನು ಜಾರಿಗೊಳಿಸಿದರೆ, ಅದನ್ನು ಸಂಪೂರ್ಣವಾಗಿ ಒಪ್ಪಲಾಗದೆಂದು ಸಂಘಟನಾ ಸಮಿತಿ ತಿಳಿಸಿದೆ.
ಸಂದರ್ಶಕರು ಆನ್‍ಲೈನ್ ಬುಕಿಂಗ್ ಮೂಲಕ ಮಾತ್ರ ದರ್ಶನ ಎಂಬ ಮತ್ತೊಂದು ನಿಬಂಧನೆಯನ್ನೂ ಸಂಘಟನಾ ಸಮಿತಿ ಅನುಮೋದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ತೃಶೂರ್ ಪೂರಂ ಅನಿಶ್ಚಿತತೆಯಲ್ಲಿ ಮುಂದುವರಿದಿದೆ.