ತಿರುವನಂತಪುರ: ಕೋವಿಡ್‍ನ ಮೊದಲ ಅಲೆ ಕುಂಠಿತಗೊಂಡಿರುವ ಕೇರಳದಲ್ಲಿ ಮುಂದಿನ ಎರಡು ತಿಂಗಳೊಳಗೆ ಎರಡನೇ ಹಂತ ದಾಪುಗಾಲಿಡುತ್ತಿದೆ ಅಧ್ಯಯನಗಳು ದೃಢಪಡಿಸಿವೆ. ದಿನಕ್ಕೆ ರೋಗಿಗಳ ಸಂಖ್ಯೆ ಮತ್ತೆ 2000 ದಾಟಲಿದೆ ಎಂದು ವರದಿ ಬೊಟ್ಟುಮಾಡಿದೆ.
ಹರಡುವ ಸಾಮಥ್ರ್ಯ ಹೆಚ್ಚಾದಂತೆ ಸಾವಿನ ಸಂಖ್ಯೆ ಹೆಚ್ಚಾಗುವ ಸೂಚನೆಗಳಿವೆ. ಯಾವುದೇ ಭದ್ರತಾ ಮಾನದಂಡಗಳನ್ನು ಪೂರೈಸದ ಚುನಾವಣಾ ಪ್ರಚಾರ ಕ್ರಮಗಳು ಕೋವಿಡ್ ತೀವ್ರ ಹರಡುವಿಕೆಗೆ ಕಾರಣವಾಗುತ್ತದೆ. ಮತ್ತು ಈಸ್ಟರ್ ಮತ್ತು ವಿಶು ಆಚರಣೆಗಳು ಆತಂಕಕ್ಕೆ ಕಾರಣವಾಗಿದೆ. ಈವರೆಗೆ ಕೇವಲ 30 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂಬುದನ್ನು ವರದಿ ಎಚ್ಚರಿಸಿದೆ.
ನಿನ್ನೆ ಸರ್ಕಾರ ಬಿಡುಗಡೆ ಮಾಡಿದ ಝೀರೋ ಸಮೀಕ್ಷೆಯ ಪ್ರಕಾರ, ಇದುವರೆಗೆ 38 ಲಕ್ಷ ಜನರು ಕೋವಿಡ್ ಗೆ ಒಳಗಾಗಿ ಗುಣಮುಖರಾಗಿದ್ದಾರೆ. ಇದರರ್ಥ 3.5 ಬಿಲಿಯನ್ ಜನಸಂಖ್ಯೆಯ ಹೆಚ್ಚಿನ ಶೇಕಡಾವಾರು ಜನರು ಇನ್ನೂ ಸೋಂಕಿಗೆ ಒಳಗಾಗಬಹುದು ಮತ್ತು ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸಬೇಕಾಗಿದೆ ಎಂಬುದನ್ನು ನೆನಪಿಸಿದೆ.